ಹೊಸಪೇಟೆ ನಗರಸಭೆಯ ಪೌರಾಯುಕ್ತರಾಗಿ


ಬಿ.ಟಿ.ಬಂಡಿವಡ್ಡರ್.
ಸಂಜೆವಾಣಿ ವಾರ್ತೆ
ಹೊಸಪೇಟೆ, ಆ.11: ಹೊಸಪೇಟೆ ನಗರಸಭೆಯ ನೂತನ ಪೌರಾಯುಕ್ತರಾಗಿ  ಬಿ.ಟಿ.ಬಂಡಿವಡ್ಡರ್  ಅಧಿಕಾರ ಸ್ವೀಕರಿಸಿದರು.
ಪೌರಾಯುಕ್ತರಾಗಿದ್ದ ಮನೋಹರ ನಾಗರಾಜ್ ಏಕಾಏಕಿ ವರ್ಗಾವಣೆಯಾದ ಪ್ರಯುಕ್ತ ಅವರ ಸ್ಥಾನಕ್ಕೆ ಬಾಗಲಕೋಟೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ  ಬಿ.ಟಿ.ಬಂಡಿವಡ್ಡರ್  ಇವರನ್ನು ನಿಯುಕ್ತಿಗೊಳಿಸಿ ಪೌರಾಡಳಿತ ಇಲಾಖೆ ನೀಡಿದ ಆದೇಶದಂತೆ ಗುರುವಾರ ಸಂಜೆ  ಅಧಿಕಾರ ವಹಿಸಿಕೊಂಡಿದ್ದಾರೆ.
ಪೌರಾಯುಕ್ತರಾಗಿದ್ದ ಮನೋಹರ ನಾಗರಾಜ ರವರಿಗೆ ಸ್ಥಳ ನಿಯುಕ್ತಿಗೊಳಿಸದ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.