ಹೊಸಪೇಟೆ ತಾ. ಆಡಳಿತದಿಂದ ಅನಗತ್ಯ ಕಿರುಕುಳ ಆರೋಪ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.21: ನಮ್ಮ ಮನೆ, ನಿವೇಶನ ಅಧಿಕೃತವಾಗಿದ್ದರು ತಾಲೂಕು ಆಡಳಿತ ಅನಗತ್ಯ ಕಿರುಕುಳ ನೀಡುವ ಮೂಲಕ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತಿದ್ದಾರೆ ಎಂದು ನೊಂದ ನಿವಾಸಿಗಳು ಮಾದ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಬಿ.ವಿ.ಭಟ್ ನೇವೃತ್ವದಲ್ಲಿ 13 ಮತ್ತು 30 ವಾರ್ಡ್ ನ ಅಂದಾಜು 39 ನಿವಾಸಿಗಳು ತಮ್ಮ ವೈವಿಧ್ಯಮಯ ಅಳಲನ್ನು ತೋಡಿಕೊಂಡರು. ಸರ್ಕಾರಿ ಅಧಿಕಾರಿಗಳಾಗಿ ನಮ್ಮ ದಾಖಲೆಗಳನ್ನು ಪರಿಶೀಲಿಸಲು ಸೌಜನ್ಯ ತೊರದೆ, ಕೆಲವರಿಗೆ ನೋಟೀಸ್ ನೀಡಿ, ಕೆಲವರಿಗೆ ನೋಟಿಸ್ ನೀಡದೆ, ನೋಟಿಸ್ ಗೆ ಸಹಿ ಹಾಕುವ ಸೌಜ್ಯವೂ ಇಲ್ಲದ ಖಾಸಗಿ ಗುಂಡಾಗಳಂತೆ ನಾಳೆಯ ತೆರವು ತೆರವು ಮಾಡಿ ಇಲ್ಲಾ ಅಂದರೆ  ಬೀದಿಗೆಸೆದು ತೆಗೆಯುವುದಾಗಿ ಬೆದರಿಸುವುದಾಗಿ ಆಗ್ರಹಿಸಿದರು.
1986 ರಲ್ಲಿ ಸರ್ಕಾರ ಬೆಂಕಿ ಆಕಸ್ಮಿಕದಲ್ಲಿ ನೊಂದು ಬೆಂದವರಿಗೆ ಹಕ್ಕು ಪತ್ರ ನೀಡಿ ಸ್ಥಳ ನೀಡಿದ್ದು 40 ವರ್ಷಗಳಿಂದ ಅನುಮತಿ ನೀಡಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ, ಕರ ಕಟ್ಟಿಸಿಕೊಂಡು, ಫಾರ್ಮನಂಬರ್ 3 ನೀಡುವ ಮೂಲಕ ಎಲ್ಲಾ ಸರ್ಕಾರಿ ಅಧಿಕಾರಿಗಳೇ ಇಂದು ಇದು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದೀರಿ ಎಂದರೆ ಹೇಗೆ ?
ಸರ್ಕಾರಿ ಅಧಿಕಾರಿಗಳಾದರೂ ನಮ್ಮ ದಾಖಲೆ ಪರಿಶೀಲನೆ ಮಾಡುವ ಸೌಜನ್ಯ ತೊರದೆ, ನಿಮ್ಮ ಸ್ವಂತ ಆಸ್ತಿ ಯಾಗಿದ್ದರೆ ನ್ಯಾಯಾಲಯಕ್ಕೆ ಹೋಗಿ ಎನ್ನುವುದು ಎಷ್ಟು ಸರಿ, ನೀಮಗೆ ನೋಟಿಸ್ ನೀಡಿಲ್ಲವೆ ಎಂದು ಕಳಸುತ್ತೇನೆ ಎಂದು ಸಹಿ ಮಾಡದೆ ನೋಟಿಸ್ ನೀಡುವ ಮೂಲಕ ಒಂದ ರೀತಿ ಮನಸ್ಸೊಇಚ್ಛೆ ವರ್ತನೆ ಮಾಡುತ್ತಿದ್ದಾರೆ ಎಂದರು.
ವಿಚಿತ್ರ ಎಂದರೆ ಜಾಗ ನೀಡಿದ್ದು ನಗರಸಭೆ, ಪಟ್ಟಾ ನೀಡಿದ್ದು ನಗರಸಭೆ, ಕರ ಪಡೆಯುತ್ತಿರುವುದು ನಗರಸಭೆ ಆದರೆ ನೋಟಿಸ್ ನೀಡುತ್ತಿರುವುದು,  ಮಾತನಾಡುತ್ತಿರುವುದು ಅಹವಾಲು ಕೇಳದಿರುವುದು ಮಾತ್ರ ತಹಶಿಲ್ದಾರರು ಎಂದು ತಮ್ಮ ಗೋಳು ತೋಡಿಕೊಂಡ ನಿವಾಸಿಗಳು ಕಾರ್ಯಾಂಗ, ಶಾಸಕಾಂಗ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲಾ ಎನಿಸುತ್ತಿದೆ ನ್ಯಾಯಾಂಗ ಮತ್ತು ಪತ್ರಿಕಾರಂಗದ ಮುಂದೆ ಹೋಗಲು ಬಂದಿದ್ದು ನ್ಯಾಯ ದೊರೆಯುವುದೊ ಕಾದುನೋಡಬೇಕು ಎಂದು ಅವರು ನ್ಯಾಯಾಲಯದ ಮುಂದೆ ಹೋಗಿ ತಡೆಯಾಜ್ಞೆ ತರುವಷ್ಟು ದೊಡ್ಡವರಂತು ಅಲ್ಲ ಸಚಿವ ಆನಂದಸಿಂಗ್ ಹೇಳಿದ ಮೇಲೆ ಪರಿಶೀಲಿಸದ ಅಧಿಕಾರಿಗಳು ಏನು ಮಾಡುತ್ತಾರೊ ಕಾದನೋಡುತ್ತೇವೆ ಒಂದು ವೇಳೆ ಕ್ರಮಕ್ಕೆ ಮುಂದಾದರೆ ನಾವಂತು ಸುಮ್ಮನಿರೋಲ್ಲಾ ನಮ್ಮನ್ನು ಮುಗಿಸಿ ಸರ್ಕಾರ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ನಿವಾಸಿಗಳಾದ ಸುದರ್ಶನ ಗುಪ್ತಾ, ರಾಘವೇಂದ್ರ ಭಟ್, ಮೊಹಮ್ಮದ್ ಸಲೀಮ್,  ಶರೀನ್ ಸೇರಿದಂತೆ 13 ಮತ್ತು 30 ವಾರ್ಡ್ ನ ನಿವಾಸಿಗಳು ಹಾಜರಿದ್ದರು.

Attachments area