ಹೊಸಪೇಟೆ ತಾಲೂಕು ಆಡಳಿತ ದಿಂದ ವಿಶ್ವಕರ್ಮ ಜಯಂತಿ.

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ17: ಹೊಸಪೇಟೆ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜ ಸಹಯೋಗಲದಲಿ ಕುಲದೈವ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಹೊಸಪೇಟೆ ತಾಲೂಕು ಕಚೇರಿಯಲ್ಲಿ ಅತ್ಯಂತ ಸರಳವಾಗಿ ನಡೆದ ಕಾರ್ಯಕ್ರವವನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಸಮಾಜದ ಮುಖಂಡರು ಸರಳವಾಗಿ ಕೋವಿಡ್ ನಿಯಮಾವಳಿಯಂತೆ ಆಚರಿಸಿದರು. ಹೊಸಪೇಟೆ ತಹಶೀಲ್ದಾರರು ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಆದ ಎಚ್. ವಿಶ್ವನಾಥ ರವರು  ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಿದರು. ವಿಶ್ವಕರ್ಮ ಜಯಂತಿಯಂದೆ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯೂ ಆಗಿರುವುದು ಸಂತಸದ ವಿಚಾರ ಆದರೆ ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ವೀರಭ್ರಪ್ಪ, ಕುಮಾರ, ವಿ.ಶಂಕ್ರಾಚಾರ್ ತಹಶೀಲ್ದಾರ ಮೇಘ, ತಹಶೀಲ್ದಾರ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.