ಹೊಸಪೇಟೆ ತಾಲೂಕಿನ ಮೂವರು ಶಾಸಕರು ಆಯ್ಕೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಮೇ.20: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶಾಸಕರಾಗಿ ಆಯ್ಕೆಯಾದವರ ಪೈಕಿ ಹೊಸಪೇಟೆ  ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್‍ನಿಂದ ಇಬ್ಬರು ಶಾಸಕರಾಗಿ ಆಯ್ಕೆಯಾದರೆ, ಜೆಡಿಎಸ್‍ನಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿ ಆಯ್ಕೆಯಾಗುವ ಮೂಲಕ ಹೊಸಪೇಟೆಗೆ ಮತ್ತೊಮ್ಮೆ ಶಾಸಕರ ನಗರಿ ಎಂಬ ಹಿರಿಮೆಗೆ ಕಾರಣರಾಗಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಎಚ್,ಆರ್. ಗವಿಯಪ್ಪನವರು ಹೊಸಪೇಟೆಯವರೇ ಆಗಿದ್ದಾರೆ. ಇನ್ನೂ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೊಸಪೇಟೆಯವರೇ ಆಗಿದ್ದಾರೆ. ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮರಾಜ್ ನಾಯ್ಕ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡಾದವರಾಗಿದ್ದಾರೆ. ಗೆದ್ದವರಲ್ಲಿ ಮೂವರು ಹೊಸಪೇಟೆಯವರೇ ಎಂಬುದು ಮತ್ತೊಂದು ವಿಶೇಷವಾಗಿದೆ.
ಕಂಪ್ಲಿ ಶಾಸಕ ಜೆ.ಎನ್. ಗಣೇಶ್ 2018 ಹಾಗು 2023ರಲ್ಲಿ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ. ಎಚ್.ಆರ್. ಗವಿಯಪ್ಪನವರು 2004 ಹಾಗು 2023ರಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಕೆ.ನೇಮರಾಜ್ ನಾಯ್ಕ 2008 ಮತ್ತು 2023ರಲ್ಲಿ ಎರಡು ಬಾರಿ ಹೀಗೆ ಮೂವರು ಸಹ ಎರಡೆರಡು ಬಾರಿ ಶಾಸಕರಾಗಿರುವುದು ಸಹ ಒಂದು ವಿಶೇಷವಾಗಿದೆ.

One attachment • Scanned by Gmail