ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ.16: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ ಹಾಗೂ ಈ ಹಿಂದಿನ ಅವಧಿಯಲ್ಲಿ ನಿಗದಿಯಾದ ಮೀಸಲಾತಿ ಆಧಾರದ ಮೇಲೆ ನಮೂದಿಸಿದ ಮಾಹಿತಿಯಂತೆ ತಂತ್ರಾಂಶದಲ್ಲಿ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮೀಸಲಾತಿ ನಿಗದಿಗೊಳಿಸಿದರು.
ಹೊಸಪೇಟೆ ತಾಲ್ಲೂಕು ವ್ಯಾಪ್ತಿಯ 14 ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಕುರಿತು ಗುರುವಾರ ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿ ಅನ್ವಯ ಆಯೋಗ ಸಿದ್ಧಪಡಿಸಿರುವ ತಂತ್ರಾಂಶದ ಮೂಲಕ ಮಿಸಲಾತಿ ನಿಗದಿ ಮಾಡಲಾಗುತ್ತದೆ. ತಂತ್ರಾಂಶದಲ್ಲಿ ನಿಗದಿತ ಮೀಸಲಾತಿಗಿಂತ ಹೆಚ್ಚುವರಿ ಗ್ರಾಮ ಪಂಚಾಯಿತಿ ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರು.
ಶೇ.50ರಷ್ಟು ಮಹಿಳೆಯರಿಗೆ ಮಿಸಲಾತಿ ನಿಗದಿ:
ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಒಟ್ಟು 14 ಗ್ರಾಮ ಪಂಚಾಯಿತಿಗಳಲ್ಲಿ ನಿಗದಿಪಡಿಸಿದ ಮಿಸಲಾತಿಯಲ್ಲಿ ಶೇ.50ರಷ್ಟು ಮೀಸಲಾತಿ ಮಹಿಳೆಯರಿಗೆ ಒದಗಿಸಲಾಯಿತು. ಒಟ್ಟು 14 ಗ್ರಾಮ ಪಂಚಾಯಿತಿಗಳಲ್ಲಿ 7 ಮಹಿಳೆಯರಿಗೆ ಮೀಸಲು ನಿಗದಿಪಡಿಸಲಾಯಿತು. ಅದರಲ್ಲಿ ತಂತ್ರಾಂಶದ ಮೂಲಕ ಒಟ್ಟು 14 ಗ್ರಾಮ ಪಂಚಾಯಿತಿಗಳಲ್ಲಿ 5 ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಅದರಲ್ಲಿ 3 ಮಹಿಳಾ ಮೀಸಲಾತಿ, 4 ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಪಂಗಡ ಅದರಲ್ಲಿ 2 ಮಹಿಳಾ ಮೀಸಲಾತಿ ಹಾಗೂ 5 ಗ್ರಾಮ ಪಂಚಾಯಿತಿಗೆ ಸಾಮಾನ್ಯ ವರ್ಗ ಅದರಲ್ಲಿ 2 ಮಹಿಳಾ ಮೀಸಲಾತಿ ಒಳಗೊಂಡಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಲಾಯಿತು.
5 ಎಸ್ಸಿ, 4 ಎಸ್ಟಿ ಹಾಗೂ 5 ಸಾಮಾನ್ಯ:
ತಂತ್ರಾಂಶದಲ್ಲಿ ಮೀಸಲಾತಿ ಪ್ರಕ್ರಿಯೆಯನ್ನು ಆರಂಭಿಸಿದಾಗ ಮೊದಲಿಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ ನಿಗದಿಯನ್ನು ಆರಂಭಿಸಿದಾಗ ಪರಿಶಿಷ್ಟ ಜಾತಿ ವರ್ಗಕ್ಕೆ ಬುಕ್ಕಸಾಗರ, ಜಿ.ನಾಗಲಾಪುರ, ಡಣಾಪುರ, ಪಾಪಿನಾಯಕನಹಳ್ಳಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಸ್ಥಾನ ನಿಗದಿಯಾಯಿತು. ಅದರಲ್ಲಿ ಜಿ.ನಾಗಲಾಪುರ, ಪಾಪಿನಾಯಕನಹಳ್ಳಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿ ಮಹಿಳಾ ಸ್ಥಾನ ನಿಗದಿಯಾಯಿತು.
ಪರಿಶಿಷ್ಟ ಪಂಗಡಕ್ಕೆ ಹೊಸೂರು, ಮಲಪನಗುಡಿ, ಚಿಲಕನಹಟ್ಟಿ ಹಾಗೂ ನಾಗೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಮೀಸಲು ನಿಗದಿಯಾಯಿತು. ಅದರಲ್ಲಿ ಹೊಸೂರು, ಮಲಪನಗುಡಿ ಗ್ರಾಮ ಪಂಚಾಯಿತಿಗಳು ಮಹಿಳಾ ಮೀಸಲಾತಿಗೆ ನಿಗದಿಯಾದವು.
ಉಪಾಧ್ಯಕ್ಷ ಸ್ಥಾನಕ್ಕೆ ಆರಂಭಗೊಂಡ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಡಣನಾಯಕನಕೆರೆ, ಸೀತಾರಾಮ ತಾಂಡ, ಬೈಲುವದ್ದಿಗೇರಿ, ಗಾದಿಗನೂರು ಹಾಗೂ ಹಂಪಿ ಗ್ರಾಮ ಪಂಚಾಯಿತಿಗಳಿಗೆ ಎಸ್ಸಿ ಮೀಸಲಾತಿ ಸ್ಥಾನ ನಿಗದಿಯಾಯಿತು. ಅದರಲ್ಲಿ ಡಣಾನಾಯಕನಕೆರೆ, ಸೀತಾರಾಮತಾಂಡ ಹಾಗೂ ಗಾದಿಗನೂರು ಗ್ರಾಮ ಪಂಚಾಯಿತಿಗಳಿಗೆ ಮಹಿಳಾ ಮೀಸಲಾತಿ ನಿಗದಿಯಾಯಿತು.
ಲಾಟರಿ ಮೂಲಕ ನಿಗದಿಯಾದ ಮೀಸಲಾತಿ:
ಪರಿಶಿಷ್ಟ ಪಂಗಡದ ಅಧ್ಯಕ್ಷ, ಉಪಾಧ್ಯಕ್ಷ(ಮಹಿಳಾ) ಸ್ಥಾನಗಳಿಗೆ ಹಾಗೂ ಸಾಮಾನ್ಯ ವರ್ಗದ ಅಧ್ಯಕ್ಷ ಮೀಸಲಾತಿ ಸ್ಥಾನಗಳಿಗೆ ಹೆಚ್ಚುವರಿ ಗ್ರಾಮ ಪಂಚಾಯಿತಿ ಬಂದ ಕಾರಣದಿಂದ ಲಾಟರಿ ಪ್ರಕ್ರಿಯೆ ಮೂಲಕ ಮೀಸಲಾತಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿಗದಿಗೊಂಡ ಗ್ರಾಮ ಪಂಚಾಯಿತಿಗಳ ವಿವರ:
1.ನಾಗೇನಹಳ್ಳಿ- ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ)
2.ಮಲಪನಗುಡಿ- ಅಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ)
3.ಹಂಪಿ- ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ)
4.ಗಾದಿಗನೂರು- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ)
5.ಪಾಪಿನಾಯಕನಹಳ್ಳಿ- ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ)
6.ಡಣಾಪುರ- ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ)
7.ಜಿ. ನಾಗಲಾಪುರ- ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ)
8.ಡಣನಾಯಕನಕೆರೆ- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ)
9.ಚಿಲಕನಹಟ್ಟಿ- ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ)
10.ಬುಕ್ಕಸಾಗರ- ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ)
11.ಬೈಲುವದ್ದಿಗೇರೆ- ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ)
12.ಕಲ್ಲಹಳ್ಳಿ- ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ)
13.ಹೊಸೂರು- ಅಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ)
14.ಸೀತಾರಾಮ ತಾಂಡ- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ)
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ಸೂಚನಾ ವಿಜ್ಞಾನ ಅಧಿಕಾರಿ ಶಿವಪ್ರಕಾಶ ವಸ್ತ್ರದ್, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಜಿ.ವಿ. ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.