ಹೊಸಪೇಟೆ ಕೋವಿಡ್ ತುರ್ತು ಸಭೆ

ಹೊಸಪೇಟೆ ಏ: ಹೊಸಪೇಟೆಯ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಗುರುವಾರದಂದು ಪಂಪಾ ಕಲಾಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್-19 ತುರ್ತು ಸಭೆಯನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು ಹೊಸಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಸಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಅನ್ನು ಉಪಯೋಗಿಸಬೇಕೆಂದರು.
ತಾಲ್ಲೂಕಿನಲ್ಲಿ ಒಟ್ಟು 20 ತಂಡಗಳನ್ನಾಗಿ ರಚನೆ ಮಾಡಿ ಅದರಲ್ಲಿ 5ಜನ ಸದ್ಯಸರುಗಳು ಇರುವ ಒಂದು ತಂಡವನ್ನಾಗಿ ರಚನೆ ಮಾಡಿ ಪ್ರತಿಯೊಂದು ತಂಡದಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಇತರೆ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರುನ್ನು ಒಟ್ಟುಗೂಡಿಸಿ ಒಂದು ತಂಡವನ್ನಾಗಿ ರಚನೆ ಮಾಡಿ ಪ್ರತಿಯೊಂದು ತಂಡಕ್ಕೆ ತಹಶೀಲ್ದಾರರನ್ನು ನೊಡೆಲ್ ಅಧಿಕಾರಿ ಆಗಿರುತ್ತಾರೆ ಎಂದರು.
ಏ.30 ರಿಂದ ಕೋವಿಡ್-19ನ ಮಾಹಿತಿ ಸಮೀಕ್ಷೆಯನ್ನು ನಡೆಸಲಾಗುತ್ತದೆ, ಮಾಹಿತಿದಾರರು ಮನೆಗೆ ಬಂದಾಗ ಸಂಪೂರ್ಣ ಮಾಹಿತಿ ಒದಗಿಸಿ ಸಹಕರಿಸಬೇಕೆಂದರು.
ಈ ಸಭೆಯಲ್ಲಿ ತಹಶೀಲ್ದಾರರಾದ ಹೆಚ್.ವಿಶ್ವನಾಥ್, ನಗರಸಭೆಯ ಪೌರಯುಕ್ತರರಾದ ಮನ್ಸೂರು ಅಲಿ, ತಾಲ್ಲೂಕು ಆರೋಗ್ಯ ಅಧಿಕಾರಿಯಾದ ಭಾಸ್ಕರ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬೆಣ್ಣೆ ಬಸವರಾಜ್ , ವಾಡಾ ಆಯುಕ್ತರರಾದ ಎಲ್.ಡಿ.ಜೋಷಿ, ಕಂದಾಯ ಇಲಾಖೆಯ ಮಲ್ಲಿಕಾರ್ಜುನ್, ಸಿಡಿಪಿಓ ಅಧಿಕಾರಿಯಾದ ಸಿಂಧು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.