ಹೊಸಪೇಟೆ ಕೊಟ್ಟೂರು ಹರಿಹರ ರೈಲು ರದ್ದು : ಹೊರಾಟಕ್ಕೆ ಸಿದ್ದ

ಸಂಜೆ ವಾಣಿ ವಾರ್ತೆ
ಕೊಟ್ಟೂರು 13: ಹೊಸಪೇಟೆ ಕೊಟ್ಟೂರು ಹರಿಹರ ನಡುವೆ ಓಡಾಡುತ್ತಿದ್ದ ರೈಲನ್ನು ನಿಲ್ಲಿಸುತ್ತಿದ್ದಾರೆ ರೇಲ್ವೇ ಅಧಿಕಾರಿಗಳು. ಅನುಕೂಲವಿಲ್ಲದ ಸಮಯದಲ್ಲಿ ರೈಲನ್ನು ಓಡಿಸುತ್ತ ಜನರೇ ಬರುತ್ತಿಲ್ಲ ಎಂದು ದೂರುತ್ತಿರುವ ಅಧಿಕಾರಿಗಳಿಗೆ ಬೇರೆಯೇ ಉದ್ದೇಶ ಕಾಣಿಸುತ್ತಿದೆ. ಈ ಭಾಗದ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಎರಡು ಕಡೆಯಿಂದ ರೈಲನ್ನು ಓಡಿಸಿದರೇ ಖಂಡಿತ ಯಶಸ್ವಿಯಾಗುತ್ತೆ. ಈ ವಿಷಯ ಅಧಿಕಾರಿಗಳಿಗೆ ತಿಳಿದೂ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈಲು ಹೊರಾಟಸಮಿತಿಯ ಶ್ರೀಧರಶಟ್ರು ಬೇಸರ ವ್ಯಕ್ತಪಡಿಸಿದ್ದಾರೆ.
 ರೈಲ್ವೇ ಅಧಿಕಾರಿಗಳಲ್ಲಿ ಕನ್ನಡಿಗರು ಇಲ್ಲ ನಮ್ಮ ಅಳಲನ್ನು ಕೇಳುವವರಿಲ್ಲ. ನಮ್ಮ ಭಾಗದ ಸಂಸದರು ಈ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕು. ಈ ಹಿಂದೆ ಹೋರಾಟ ಮಾಡಿದ ಮಹನೀಯರಗಳು ಮತ್ತೊಮ್ಮೆ ಹೋರಾಟ ಮಾಡಲು ಸಜ್ಜಾಗಬೇಕಿದೆ ಎಂದರು.
ಪ್ರಯಾಣಿಕರ ಕೊರತೆಯಿಂದಾಗಿ ರೈಲ್ವೆ ಇಲಾಖೆ  ಸಂಚರಿಸುತ್ತಿದ್ದ ರೈಲು ಓಡಾಟವನ್ನು ಸೆ.14ರಿಂದ ರದ್ದು ಮಾಡಿ ಆದೇಶ ಹೊರಡಿಸಿದೆ.ಹೊಸಪೇಟೆಯಿಂದ ಹರಿಹರಕ್ಕೆ ಓಡುತ್ತಿದ್ದ 06245 ಮತ್ತು ಬರುತ್ತಿದ್ದ 06246 ನಂಬರ್ ನ ರೈಲುಗಳನ್ನು ರದ್ದುಪಡಿಸಲಾಗಿದೆ.