ಹೊಸಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ಫೀಲ್ಡ್ ಗಿಳಿದ ಎಸಿ, ಡಿವೈಎಸ್ಪಿ

ಹೊಸಪೇಟೆ ಏ 25 : ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ಕಂಡು ಸ್ವತಹ ಎಸಿ, ಡಿವೈಎಸ್ಪಿ ಯವರು ಫೀಲ್ಡ್ ಗಿಳಿದು ಜನರನ್ನು ನಿಯಂತ್ರಿಸಿದರು.
ಹೊಲ್ ಸೇಲ್ ಮಾರೋ ಬದಲು ರಿಟೇಲ್ ಮಾರೋರಿಗೆ ಮುಲಾಜಿಲ್ಲದೇ ಕೇಸ್ ಬುಕ್ ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದರು.
ನಾವು ರೀಟೆಲ್ ಮಾರಾಟ ಮಾಡುವುದಿಲ್ಲ ಎಂದು ಹೊಲ್ ಸೇಲ್ ಮಾರೋ ವ್ಯಾಪಾರಸ್ಥರು ಹೇಳಿದಾಗ ರಿಟೇಲ್ ಮಾರ್ತಾರಿ ನನ್ನ ಬಳಿ ಸಾಕ್ಷಿ ಇದೆ ಆಟ ಆಡಬೇಡಿ ಎಂದು ವಾರ್ನ್ ಮಾಡಿದರು ಟಿಬಿ ಡ್ಯಾಂ ಪಿಐ ನಾರಾಯಾಣ.
ಕಾನೂನು ಉಲ್ಲಂಘನೆಯಾದ್ರೆ ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದರು ಎಸಿ ಸಿದ್ದರಾಮೇಶ್ವರ.
ರಿಟೇಲ್ ವ್ಯಾಪಾರಕ್ಕೆ ಬೇರೆ, ಬೇರೆ ಕಡೆ ಮಾರುಕಟ್ಟೆ ಮಾಡಲಾಗಿದೆ, ಅದನ್ನು ಬಿಟ್ಟು ಎಪಿಎಂಸಿಯಲ್ಲಿ ಮಾರಾಟ ಮಾಡ್ತಿರಾ
ಕಾನೂನು ಪಾಲನೆ ಎಲ್ಲರಿಗೂ ಒಂದೇ ಎಂದು ಲಾಠಿ ಹಿಡಿದು ನಿಂತ ಎಸಿಯನ್ನು ಕಂಡು ವ್ಯಾಪಾಸ್ಥರು ಚದುರಿದರು.