ಹೊಸಪೇಟೆ ಆರ್ಯ ವೈಶ್ಯ ಸಂಘಕ್ಕೆ ಚುನಾವಣೆ ಜಯಭೇರಿ ಬಾರಿಸಿದ ಪತ್ತಿಕೊಂಡ ಕುಮಾರಸ್ವಾಮಿ ತಂಡ

ಹೊಸಪೇಟೆ ಏ16: ತೀವ್ರ ಕುತುಹಲ ಹಾಗೂ ಎರಡು ಗುಂಪುಗಳಲ್ಲಿ ಚುನಾವಣೆಯ ಕಣವನ್ನು ಪ್ರವೇಶಿಸಿದ್ದ ಆರ್ಯ ವೈಶ್ಯ ಸಂಘದ ಚುನಾವಣೆ ಗುರುವಾರ ಅಂತ್ಯಗೊಂಡಿದ್ದು ಪತ್ತಿಗೊಂಡ ಕುಮಾರಸ್ವಾಮಿ ನೇತೃತ್ವದ ತಂಡ ಅಂತಿಮವಾಗಿ ವಿಜಯ ಸಾಧಿಸುವ ಮೂಲಕ ಅಧಿಕೃತವಾಗಿ ಆಯ್ಕೆಯಾಗಿದೆ
ಚುನಾವಣಾಧಿಕಾರಿಗಳು ಆದ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ ಲಿಯಾಖತ್‍ಅಲಿ ರವರು ಗುರುವಾರ ರಾತ್ರಿ ಅಧಿಕೃತವಾಗಿ ಮುಂದಿನ ಮೂರುವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದರು. ಅಧ್ಯಕ್ಷಸ್ಥಾನಕ್ಕೆ ಪತ್ತಿಕೊಂಡ ಕುಮಾರಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಕುಬಾಳ ರಾಜೇಂದ್ರ, ಅರಳಿಹಳ್ಳಿ ಬದ್ರಿನಾಥಶೆಟ್ಟಿ ಹಾಗೂ ತೆಕ್ಕಲಕೋಟ ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಸ್ಥಾನಕ್ಕೆ ಎಂ.ಸತ್ಯನಾರಾಯಣ ಶೆಟ್ಟಿ ಆಯ್ಕೆಯಾದರೆ ಸಹಕಾರ್ಯದರ್ಶಿ ಸ್ಥಾನಕ್ಕೆ ಪ್ರಹ್ಲಾದ್ ಭೂಪಾಳ, ಗಂಗಾವತಿ ಸಂಜೀವಶೆಟ್ಟಿ ಹಾಗೂ ಜೆ.ಎಸ್.ರಮೇಶಗುಪ್ತಾ ಖಚಾಂಚಿ ಸ್ಥಾನಕ್ಕೆ ನರೇಗಲ್ಲು ನೀಲಕಂಠಶೆಟ್ಟಿ ಮತ್ತು ಸಹ ಖಚಾಂಚಿ ಸ್ಥಾನಕ್ಕೆ ಸಿದ್ಧಂಶೆಟ್ಟಿ ಭರಮಣ್ಣ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.