
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ.26: ಸ್ಥಳೀಯ ಸಿದ್ಧಿವಿನಾಯಕ ದೇವಸ್ಥಾನದ 24ನೇ ವಾರ್ಷಿಕೋತ್ಸವ ಅದ್ದೂರಿ ಪೂಜಾ ಕೈಂಕರ್ಯಗಳಿಂದ ಜರುಗಿತು.
ಮುಖ್ಯ ರಸ್ತೆಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕಳೆದ 24 ವರ್ಷಗಳಿಂದ ಅನೇಕ ವಿಶೇಷ ಕಾರ್ಯಕ್ರಮಗಳ ಮೂಲಕ ಖ್ಯಾತವಾಗಿದ್ದು ಇಂದು ಬೆಳಿಗ್ಗೆ ಗಣಪತಿ ಪೂಜನದೊಂದಿಗೆ ಆರಂಭವಾದ ಕಾರ್ಯಕ್ರಮಗಳಲ್ಲಿ ಪೂಣ್ಯಾವಾಚನ, ಧ್ವಜಾರೋಹಣ, ಶತ ಕುಂಭಾಭಿಷೇಕ, 21 ತಿಂಗಿನಕಾಯಿಗಳಿಂದ ಗಣ ಹೋಮ, ಗರಿಕೆ ಹೋಮ, ಗರಿಕೆ ಪೂಜೆ, ಪೂಣಾಹುತಿಯೊಂದಿಗೆ ವಿಶೇಷ ಅಲಂಕಾರಗಳು ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ಜರುಗಿತು.
ಬೆಳಿಗ್ಗೆ ಯಿಂದಲೇ ಸಾಲುಗಟ್ಟಿ ನಿಂತ ಭಕ್ತರು ವಿಶೇಷ ಪೂಜಾ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಆಡಳಿತ ಮಂಡಳಿಯ ಭೂಪಾಳ ಪ್ರಹ್ಲಾದ್, ಸುವರ್ಣಾ ಸಣ್ಣಕ್ಕೆಪ್ಪ, ಶರಣಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.