ಹೊಸಪೇಟೆಯ ಭದ್ರ್ಯಾನಾಯ್ಕ್ ತಾಂಡಾಕ್ಕೆ ಕಲಬುರ್ಗಿ ಸಂಸದರ ಭೇಟಿ

ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ನ28: ಕಳೆದ 3 ತಲೆಮಾರುಗಳಿಂದ ವಾಸವಾಗಿದ್ದರೂ ಸದ್ಯ ಒಕ್ಕಲೇಬಿಸುವ ಆತಂಕದಲ್ಲಿದ್ದ ಹೊಸಪೇಟೆಯ 35ನೇ ವಾಡ್ ಭದ್ರ್ಯಾನಾಯ್ಕ್ ತಾಂಡಾಕ್ಕೆ ಕುಲಬುರ್ಗಿ ಸಂಸದ ಉಮೇಶ್ ಜಾದವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಪೇಟೆಯ 35ನೇ ವಾರ್ಡ್ ವ್ಯಾಪ್ತಿಗೆ ಬರುವ ಭದ್ರ್ಯಾನಾಯ್ಕ್ ತಾಂಡಾದಲ್ಲಿ ಕಳೆದ 90 ರಿಂದ 100 ವರ್ಷಗಳಿಂದ ವಾಸವಾಗಿರುವ  ಸುಮಾರು 90 ಕುಟುಂಬಗಳನ್ನು ಒಕ್ಕಲೇಬಿಸುತ್ತಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಇತ್ತೀಜೆಗಷ್ಟೇ ಸರ್ವೆ ಕಾರ್ಯವೂ ಆಗಿದೆ ಎಂದು ಆತಂಕಗೊಂಡ ನಿವಾಸಿಗಳು ಕುಲಬುರ್ಗಿಯ ಸಂಸದ ಉಮೇಶ್ ಜಾದವ್‍ರವನ್ನು ಭೇಟಿಯಾಗಿ ದೂರವಾಣಿ ಕರೆಮಾಡಿ ಆತಂಕತೊಡಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಧಿಢೀರ್ ಭೇಟಿ ನೀಡಿದ ಸಂಸದರು ಸ್ಥಳೀಯರೊಂದಿಗೆ ಸಂವಾದ ಹಾಗೂ ಅವರ ಆತಂಕಗಳನ್ನು ಆಲಿಸಿ, ಪ್ರದೇಶ, ಅಲ್ಲಿನ ಮೂಲಸೌಕರ್ಯಗಳು ಸೇರಿದಂತೆ ನಾಗರಿಕ ಸೌಲಭ್ಯಗಳನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತ್ಯಂತ ದಯನೀಯಸ್ಥಿತಿಯಲ್ಲಿ ನಿವಾಸಿಗಳಿದ್ದಾರೆ, ಲಂಬಾಣಿ ಸೇರಿದಂತೆ ವಿವಿಧ ಸಮಾಜಗಳ ಅನೇಕರು ಅನೇಕ ವರ್ಷಗಳಿಂದ ವಾಸವಾಗಿದ್ದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನೂತನವಾಗಿ ಜಿಲ್ಲೆಯಾದ ಮೇಲೆ ಅನೇಕ ಅಭಿವೃದ್ಧಿಕಾರ್ಯಗಳು ನಡೆಯುತ್ತಿದ್ದು ಇದೀಗ ಇಲ್ಲಿನ ನಿವಾಸಿಗಳು ಒಕ್ಕಲೇಬಿಸುವ ಆತಂಕದಲ್ಲಿದ್ದಾರೆ, ನಾನು ಮುಂದಿನ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗಿದ್ದು ತಕ್ಷಣವೇ ಮುಖ್ಯಮಂತ್ರಿಯಾದಿಯಾಗಿ, ಸ್ಥಳೀಯ ಶಾಸಕರು ಹಾಗೂ ಸಚಿವರಾಗಿರುವ ಆನಂದಸಿಂಗ್ ರವರೊಂದಿಗೂ ಚಿರ್ಚೆ ಮಾಡಿ ಇವರುಗಳ ಆತಂಕ ದೂರಮಾಡುವುದಾಗಿ ತಿಳಿಸಿದರು.
ಸ್ಥಳೀಯರ ಕರೆಯ ಮೇರೆಗೆ ಬಂದಿದ್ದು ವಾಸ್ತವತೆಯನ್ನು ಅರಿತಿದ್ದೇನೆ ಈ ಸಂಬಂಧ ಅಧಿಕಾರಿಗಳು ಹಾಗೂ ಮುಖಂಡರೊಂದಿಗೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರಮುಖವಾಗಿ ಸ್ಥಳೀಯ ಮಹಿಳೆಯರು ತಮ್ಮ ಅಭದ್ರ ಬದುಕಿನ ಆತಂಕವನ್ನು ಸಂಸದರೊಂದಿಗೆ ತೊಡಿಕೊಂಡರು, ಮುಖಂಡರಾದ ರಾಮಜೀನಾಯ್ಕ್, ವಿ.ಕೃಷ್ಣಾನಾಯ್ಕ್, ತೇಜಾನಾಯ್ಕ್, ಜಿ.ಪ್ರವೀಣ್‍ನಾಯ್ಕ್, ಕೆ.ಪಿ.ನಾಯ್ಕ್ ಸೇರಿದಂತೆ ಅನೇಕರು ಸಂಸದರೊಂದಿಗೆ ಸ್ಥಳೀಯ ಸಮಸ್ಯಗಳನ್ನು ತೊಡಿಕೊಂಡರು.