ಹೊಸಪೇಟೆಯ ಗ್ರಾಮ ದೇವತಾ ಊರಮ್ಮದೇವಿ ಹುಂಡಿಯಲ್ಲಿ 2.13 ಲಕ್ಷ ನಗದು

ಹೊಸಪೇಟೆ ಮಾ29: ನಗರದ ಶ್ರೀಗ್ರಾಮದೇವತಾ ಊರಮ್ಮ ದೇವಿ ದೇವಸ್ಥಾನ ಹುಂಡಿಯನ್ನು ಇಂದು ತೆರೆಯಲಾಗಿದ್ದು 2.13 ಲಕ್ಷ ನಗದು ಹುಂಡಿಯಲ್ಲಿ ಶೇಖರವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್ ತಿಳಿಸಿದ್ದಾರೆ.
ಸೋಮವಾರ ಗ್ರಾಮದೇವತಾ ದೇವಸ್ಥಾನದಲ್ಲಿ ತೆರೆದ ಹುಂಡಿಯಲ್ಲಿ ಎಲ್ಲಾ ಹಂತದ ನಗದು ಸೇರಿದಂತೆ ಒಟ್ಟು 2.13 ಲಕ್ಷ ನಗದು ಸಂಗ್ರಹವಾಗಿದೆ. ಬೆಳಿಗ್ಗೆ ಇಂದಲೇ ಪ್ರಕಾಶರಾವ್, ಕಂದಾಯ ಇಲಾಖೆಯ ಶೀರಸ್ತೆದಾರರಾದ ರಮೇಶ್, ಸ್ಥಳೀಯ ಮುಖಂಡರಾದ ಬಂಡೆ ಶ್ರೀನಿವಾಸ್, ಎಸ್.ಗಾಳೇಪ್ಪ, ಜಂಬಾನಹಳ್ಳಿ ಪರಶುರಾಮಪ್ಪ, ಕಲ್ಗುಡಿ ಭೀಮಪ್ಪ, ಬಂದಿ ಜಂಬಯ್ಯ ಸೇರಿದಂತೆ ಕಾರ್ಯದರ್ಶಿ ವಿ.ಶಂಕ್ರಾಚಾರಿ ಸ್ಥಳೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು