ಹೊಸಪೇಟೆಯ ಉಡುಪಿ ಕೃಷ್ಣ ಭವನದಲ್ಲಿ ಆಕಸ್ಮಿಕ ಬೆಂಕಿ

ಹೊಸಪೇಟೆ ಮಾ 30 : ಬಸ್ ನಿಲ್ದಾಣದ ಎದುರುಗಡೆಯೇ ಇರುವ, ಸದಾ ಜನನಿಭೀಡ ಹೋಟೆಲ್ ಆಗಿರುವ ಉಡುಪಿ ಶ್ರೀಕೃಷ್ಣ ಭವನದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಬವಿಸಿದ್ದು ಸಿಬ್ಬಂದಿಯ ಸಮಯ ಪ್ರಜ್ಞೆ ಬಾರಿ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಮಧ್ಯಾಹ್ನ 12 55 ರ ಸುಮಾರಿಗೆ ಅಡುಗೆ ಮನೆಯ ಬಾಯ್ಲರ್‍ಗೆ ಹೊತ್ತಿದ ಬೆಂಕಿಯನ್ನು ಕಂಡ ಅಡುಗೆ ಸಿಬ್ಬಂದಿಗಳು ತಕ್ಷಣವೇ ಕಾರ್ಯಪ್ರವರ್ತರಾಗಿ ನಂದಿಸಲು ಮುಂದಾದರು, ಅಷ್ಟರಲ್ಲಿಯೇ ಸರಿಯಾಗಿಯೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯೂ ಸಹ ನಂದಿಸುವಲ್ಲಿ ಯಶಸ್ವಿಯಾದರೂ ಈ ಮಧ್ಯ ಅಡುಗೆ ಮನೆಯಲ್ಲಿಯೇ ಇದ್ದ 8 ಕ್ಕೂ ಹೆಚ್ಚಿನ ವಾಣಿಜ್ಯ ಬಳಕೆಯ ಗ್ಯಾಸ್ ಸಿಲೆಂಡರ್‍ಗಳನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಿದ ಕಾರಣ ಬಾರಿ ಅನಾಹುತವೇ ತಪ್ಪಿದಂತಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಂತೆಯೇ ಹೋಟೆಲ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದು ಆಗಬಹುದಾದ ಬಾರಿ ಅನಾಹುತ ತಪ್ಪಿಸಲು ಸಹಕಾರಿಯಾಗಿದೆ.