ಹೊಸಪೇಟೆಯಿಂದ ಆಂಜನಾದ್ರಿಗೆ ಬಸ್ ವ್ಯವಸ್ಥೆಗಾಗಿ ಮನವಿ

ಹೊಸಪೇಟೆ ನ 20 : ಆನೆಗುಂದಿಯ ಪ್ರಖ್ಯಾತ ಭಕ್ತಿಧಾಮ ಆಂಜನಾದ್ರಿ, ದುರ್ಗಾದೇವಿ ಪರ್ವತ ಹಾಗೂ ಪಂಪಾ ಸರೋವರಕ್ಕೆ ಹೊಸಪೇಟೆಯಿಂದ ಬಸ್ ವ್ಯವಸ್ಥೆಗೆ ಆಗ್ರಹಿಸಿ ಇಂದು ಶ್ರೀರಾಮ ಸೇನೆಯು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶೀನಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹೊಸಪೇಟೆಯಿಂದ ಆಂಜನಾದ್ರಿ ಹಾಗೂ ಇತರೆ ಸ್ಥಳೀಯ ದೇವಸ್ಥಾನಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಹಾಗೂ ಬೇರೆ ಭಾಗದ ಅತಿಹೆಚ್ಚು ಭಕ್ತರು ನಗರದ ಮೂಲಕವೇ ಆಂಜನಾದ್ರಿ ಬೆಟ್ಟಕ್ಕೆ ತೆರಳುವ ಕಾರಣ ಹೊಸಪೇಟೆ ವಿಭಾಗದಿಂದ ಆಂಜನಾದ್ರಿ ಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶೀನಯ್ಯ ಅವರು ಕೊಪ್ಪಳದ ವಿಭಾಗದ ಅಧಿಕಾರಿಗಳ ಹತ್ತಿರ ಚರ್ಚಿಸಿ ಸಾರಿಗೆ ವ್ಯವಸ್ಥೆ ಲೂಷಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಜಗದೀಶ್ ಕಮಟಗಿ ಸೇರಿದಂತೆ ಅಭಿಷೇಕ್ ಸಿಂಗ್, ಸೂರಿ ಬಂಗಾರು, ಮಲ್ಲಣ್ಣ ಇತರರು ಇದ್ದರು.