ಹೊಸಪೇಟೆಯಲ್ಲಿ 5.70 ಲಕ್ಷ ರೂಗಳ ಡ್ರಗ್ಸ್ ವಶ ಇಬ್ಬರ ಬಂಧನ

ಬಳ್ಳಾರಿ ಜೂ 03 : ಇಂದು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ 5.70 ಲಕ್ಷ ರೂಗಳ ನಶೆ ಬರುವ 570 ಎಲ್.ಎಸ್.ಡಿ ಮಾತ್ರೆಗಳನ್ನು ಇಲ್ಲಿನ ಚಿತ್ತವಾಡಿಗಿ ಠಾಣೆಯ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಹೊಸಪೇಟೆ ನಗರದ ವಿ.ಎಸ್.ಸಿ. ಕಾಲೇಜು ಬಳಿಯ ಚೆಕ್ ಪೋಸ್ಟ್ ನಲ್ಲಿ ಬಂದ ಕೆಎ-41 ಎಂಡಿ 1976 ನಂಬರ್ ಕಾರನ್ನು ಅನುಮಾನಿಸಿ ತಪಾಸಣೆ ಮಾಡಿದಾಗ. ಅದರಲ್ಲಿದ್ದ ಬ್ಯಾಗಿನಲ್ಲಿ ಈ ಡ್ರಗ್ಸ್ ಮಾತ್ರೆಗಳು ದೊರೆತಿವೆ.
ಕಾರಿನಲ್ಲಿ ಬಂದಿದ್ದ ಬೆಂಗಳೂರಿನ ರಘುನಾಥ್ ಕುಮಾರ(23) ಮತ್ತು ಹಿರಿಯೂರಿನ ಸೋಲಮನ್ (22)ಎಂಬ ಯುವಕರನ್ನು ಬಂಧಿಸಲಾಗಿದೆ. ಜೊತೆಗೆ ಅವರ ಬಳಿ‌ ಇದ್ದ 35 ಸಾವಿರ ರೂ ನಗದು ಮತ್ತು ಕಾರನ್ನು ಸಹ ವಶಪಡಿಸಿಕೊಂಡಿದೆ.
ಇವರು ಎಲ್ಲಿಂದ ಇವನ್ನು‌ ತಂದರು ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು‌ ಬರಬೇಕಿದೆ.