ಹೊಸಪೇಟೆಯಲ್ಲಿ 29 ರಿಂದ 3ದಿನಗಳ ಕ್ರೀಡಾಕೂಟ


ಸಂಜೆವಾಣಿ ವಾರ್ತೆ
ವಿಜಯನಗರ,ಹೊಸಪೇಟೆ ಜು24: ಗ್ರಾಮೀಣ ಕ್ರೀಡೆಯಾದರೂ, ಎಲ್ಲಾ ಕ್ರೀಡೆಗಳ ಮೂಲವಾಗಿರುವ ಈ ಹಳ್ಳಿಯ ಹಗ್ಗದಾಟ ಇಂದು ವಿಶ್ವ ಮಾನ್ಯತೆಯ ಜಂಪ್‍ರೋಪ ಆಗಿ ಬದಲಾಗಿರುವುದು ನಾವು ಹೆಮ್ಮೆ ಪಡುವ ಸಂಗತಿ ಎಂದು ಜಂಪ್‍ರೋಪ್ ಫೆಡರೇಷನ್ ಆಪ್ ಇಂಡಿಯಾದ ನಿರ್ದೇಶಕ ಅನಂತ ಜೋಶಿ ತಿಳಿಸಿದರು.
ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಇದೆ ಜುಲೈ 29, 30 ಮತ್ತು 31 ರಂದು 19ನೇರಾಷ್ಟ್ರೀಯ ಸಬ್-ಜ್ಯೂನಿಯರ್ ಜಂಪ್‍ರೋಪ್ ಚಾಂಪಿಯನ್ ಶಿಫ್, 18ನೇ ರಾಷ್ಟ್ರೀಯ ಫೆಡರೇಷನ್ ಕಫ್ ಹಾಗೂ 36 ಗಂಟೆಗಳ ನಿರಂತರ “ಡಬಲ್ ಡಚ್” ವಿಶ್ವದಾಖಲೆಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು ಈ ಭಾಗವಾಗಿ ಬ್ಯಾಸಕೇಟ್ ಬಾಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಾಯೋಗಿಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ಈ ಕ್ರೀಡೆ ಇಂದು ವಿಶ್ವಮಾನ್ಯತೆ ಪಡೆದಿರುವುದು ಮತ್ತು ಇಂತಹ ರಾಷ್ಟ್ರೀಯ ಕ್ರೀಡಾಕೂಟ ಹೊಸಪೇಟೆಯಲ್ಲಿ ನಡೆಯುತ್ತಿರುವುದು ನಮ್ಮ ಸುದೈವ, ಇಂತಹ ಅವಕಾಶಗಳು ನಮ್ಮ ಗ್ರಾಮೀಣ ಕ್ರೀಡಾಪಟುಗಳು ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ ಎಂದರು.
ವಿಕಾಸ ಬ್ಯಾಂಕ್ ನಿರ್ದೇಶಕ ರಮೇಶ ಪುರೋಹಿತ್ ಮಾತನಾಡಿ, ನಮ್ಮ ಬ್ಯಾಂಕ್ ಬೆಳ್ಳಿ ಹಬ್ಬ ಅವಿಸ್ಮರಣೀಯವಾಗಬೇಕು ಎಂದು ವಿಶ್ವದಾಖಲೆಯ 36 ಗಂಟೆ ನಿರಂತರ ಜಂಪ್‍ರೋಪ್ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಬ್ದುಲ್‍ರಜಾಕ್ ಟೇಲರ್ ಮಾತನಾಡಿ ದೇಶದ 500 ಮಕ್ಕಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಾಗೂ 150 ಮಕ್ಕಳು ವಿಕಾಸ ಬ್ಯಾಂಕ್ ಬೆಳ್ಳಿಹಬ್ಬದ ಸ್ಮರಣಾರ್ಥದ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ,  ವಿಶ್ವ ದಾಖಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಮಾಹಿತಿ ನಮ್ಮ ಜನತೆಗೆ ತಿಳಿಯಲಿ ಎಂಬ ಆಸೆಯದಿಂದ ಇಂದು ಪ್ರಾಯೋಗಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲು ಶಾಲಾ ಕ್ರೀಡಾಕೂಟದಲ್ಲಿಯೂ ಇರುವ ಕ್ರೀಡೆಯಲ್ಲಿ ಪಾಲ್ಗೊಳ್ಳವಂತೆ ತಿಳಿಸಿದರು. ಇದೆ ಜುಲೈ29, 30, 31 ರ ಮೂರು ದಿನ ಸಾರ್ವಜನಿಕರು ಕ್ರೀಡೆಯ ಸಂತನವನ್ನು ಪಡೆಯುವಂತೆ ತಿಳಿಸಿದರು.
ಹೊಸಪೇಟೆಯ ವಿಕಾಸ ಸೌಹಾರ್ದಕೋ-ಆಪರೇಟಿವ್ ಬ್ಯಾಂಕ್‍ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಜಂಪ್‍ರೋಪ್ ಫೆಡರೇಷನ್ ಆಪ್ ಇಂಡಿಯಾ ಹಾಗೂ ಜಂಪ್‍ರೋಪ್ ಅಸೋಶಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದಲ್ಲಿ ನೂತನ ವಿಜಯನಗರಜಿಲ್ಲೆಯ ವಿಶ್ವದಾಖಲೆಯ ಕ್ಷಣವಾಗಲು ಹೆಮ್ಮಯಾಗಲಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು ದೇಶದ ವಿವಿಧಡೆಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೆ ಸಕಲ ಸೌಕರ್ಯಗಳನ್ನು ಮಾಡಲಿಕೊಳ್ಳಲಾಗಿದೆ.
ಹೊಸಪೇಟೆಯ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಡಬಲ್‍ಡಚ್ ಕ್ರೀಡೆಯ ಪರಿಕಲ್ಪನೆ ತಿಳಿಸುವ ಜೊತೆ 30 ಗಂಟೆಯ ಪ್ರಾಯೋಗಿಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರನ್ನು ರಂಚಿಸುವದರ ಜೊತೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಪ್ರಾಯೋಗಿಕ ಪ್ರದರ್ಶನದಲ್ಲಿ ರಾಜ್ಯ ಅಸೋಶಿಯೇಷನ್ ನಿರ್ದೇಶಕರಾದ ಕೆ.ದಿವಾಕರ, ರಾಘವೇಂದ್ರ ಜಮಖಂಡಿ,  ವಿಕಾಸ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾದ ಛಾಯಾದಿವಾಕರ, ಪದ್ಮಾವತಿ, ಕೆ.ಉಷಾ,  ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ, ವ್ಯವಸ್ಥಾಪಕ ಗುರುಸಿದ್ಧಯ್ಯ ಹಿರೇಮಠ, ಅಶ್ವಿನಿ ದೇಸಾಯಿ ಗವಿಸಿದ್ಧಪ್ಪ, ಕಾರ್ಯಕ್ರಮದ ಕಾರ್ಯದರ್ಶಿ ಆರೋನ್ ವಿಜಯ ಹಂಚಿನಾಳ, ತರಬೇತುದಾರರಾದ ರಫೀಕ್, ನಿಂಗಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.