ಹೊಸಪೇಟೆಯಲ್ಲಿ ಸರಳವಾಗಿ ಗಣಪತಿ ಹಬ್ಬ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ11: ಸರ್ಕಾರಿ ನಿಯಮಗಳ ಹಿನ್ನೆಲೆಯಲ್ಲಿ ಅತ್ಯಂತ ಸರಳ ಹಾಗೂ ಹಬ್ಬದ ವಾತಾವರಣವೇ ಕಾಣದ ಗಜಾನನ ಉತ್ಸವ ಹೊಸಪೇಟೆಯಲ್ಲಿ ಆರಂಭವಾಗಿದೆ.
ನಗರದ ಅನೇಕ ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಆರಂಭವಾದರು ಬಹುತೇಕ ಯಾರೂ ಟೆಂಟ್ ಹಾಕುವ, ಅಲಂಕಾರ ಮಾಡುವ ಗೋಜಿಗೆ ಹೋಗದೆ ಉತ್ಸವ ಆಚರಣೆಗೆ ಮುಂದಾಗಿದ್ದಾರೆ. ಅನೇಕ ವರ್ಷಗಳಿಂದ ದಶಕಗಳಿಂದ ಉತ್ಸವ ಮಾಡಿದ್ದೇವೆ ಬಿಡಬಾರದು ಎಂಬಂತೆ ಮಾಡಿರುವುದೆ ಹೆಚ್ಚು, ಬೆಳಿಗ್ಗೆ ಸಣ್ಣ ಸಣ್ಣ ಗಣೇಶ ಮೂರ್ತಿಗಳನ್ನು ತಂದು ಪೂಜಿಸಿ ಸಂಜೆಯೇ ವಿಸರ್ಜನೆ ಮಾಡಿದವರೆ ಅಧಿಕವಾಗಿದು ಈವರ್ಷದ ಉತ್ಸವದ ವಿಶೇಷವೇ ಸರಿ.
ಕರೋನಾ ಮಹಾಮಾರಿ ಅನೇಕ ಸರಳತೆಯನ್ನು ಕಲಿಸಿಕೊಟ್ಟಿದ್ದು ಸರ್ಕಾರ ನೀಡಿರುವ ಮಾರ್ಗಸೂಚಿಗಳ ಅನ್ವಯ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಉತ್ಸವ ಸಮಿತಿಗಳು ಬಹುತೇಕ ಅಂತಯೇ ಆಚರಿಸುವ ಮೂಲಕ ಉತ್ಸವ ಸಡಗರ ಸಂಭ್ರಮವಿಲ್ಲದಂತೆ ಮಾಡಿದ್ದು ಈ ವರ್ಷದ ವಿಶೇಷವಾಗಿತು.
ನಗರದ ವಿಕಾಸ ಯುವಕ ಮಂಡಳಿ, ಪ್ರಸನ್ನ ಯುವ ಮಂಡಳಿ ಸೇರಿದಂತೆ ಅನೇಕ ಉತ್ಸವ ಸಮಿತಿಗಳು ಉತ್ಸವ ಮಾಡಿದರು ಸ್ವಲ್ಪವೂ ಉತ್ಸವದ ವಾತಾವರಣವೇ ಕಾಣದಾಗಿತು. ಇನ್ನು ಅಲ್ಲಲಿ ಉತ್ಸವ ಸಮಿತಿಗಳು ಆಚರಿಸಿದರು ಸರಳವಾಗಿರುವುದು ಕಂಡುಬಂತು.
ಆದರೆ ಚಿಣ್ಣರ ಉತ್ಸವ ಮಾತ್ರ ಸ್ವಲ್ಪಮಟ್ಟಿನ ಉತ್ಸಾಹ ಕಂಡಿದ್ದು ವಿಶೇಷವಾಗಿತು ನಗರದ ಬಹುತೇಕ ಕಡೆ ಹಿರಿಯರ ಮಾರ್ಗದರ್ಶನ ಪಡೆದು ಆಚರಿಸಿದರು.
ಹಂಪಿ ರಸ್ತೆಯ 6ನೇ ವಾರ್ಡ್ ಹೂಗಾರ್ ಓಣಿಯಲ್ಲಿ ಮಕ್ಕಳು ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪ್ರಕೃತಿ ಪ್ರೇಮವನ್ನು ಮೆರೆಯುವ ಮೂಲಕ ಉತ್ಸವ ಆಚರಿಸಿದರು. ಚಿಣ್ಣರಾದ ದರ್ಶನ್, ವಿನಾಯಕ್, ಹರೀಶ್, ಕೊಡದೇಶ್, ವಿಕ್ರಂ, ಚಂದ್ರಶೇಖರ್, ಜಶ್ವಂತ, ಅತಿಶಯ್ ಚೌವ್ಹಾಣ್, ಆರ್ಯನ್ ವಿರೇಶ್ ಪಾಲ್ಗೊಂಡು ಕೋವಿಡ್ ನಿಯಮಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದು ವಿಶೇಷವಾಗಿತು.
ಇನ್ನು ಮುಖ್ಯರಸ್ತೆಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿಯ ಭೂಪಾಳ ಪ್ರಹ್ಲಾದ್ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಪ್ರಸನ್ನ ಯುವ ಮಂಡಳಿ ಮಾತ್ರ ವಡಕರಾಯಸ್ವಾಮಿ ದೇವಸ್ಥಾನದ ಒಳಗೆ ಪ್ರತಿಷ್ಠಾಪನೆ ಮಾಡಿರುವುದರಿಂದ ಧಾರ್ಮಿಕ ವಿಧ ವಿಧಾನಗಳ ಮೂಲಕ ಹೋಮ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳೂಂದಿಗೆ ಉತ್ಸವ ಆಚರಿಸಿದ್ದು ವಿಶೇಷವಾಗಿತು.