ಹೊಸಪೇಟೆಯಲ್ಲಿ ಶಾಂತಿ ಸಭೆ. ಸರಳ ಹಾಗೂ ಮಾದರಿ ಗಣೇಶ ಉತ್ಸವಕ್ಕೆ ತೀರ್ಮಾನ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ8: ಗಣೇಶ ಪ್ರತಿಷ್ಠಾಪಿಸುವ ಸ್ಥಳಗಳು  ಕೊರೊನಾ ಲಸಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿ ಉತ್ಸವ ಆಚರಿಸಲು ಮುಂದಾಗಬೇಕು ಎಂದು ಡಿವೈಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ ಸಲಹೆ ನೀಡಿದರು.
ಗಣೇಶ ಹಬ್ಬದ ಅಂಗವಾಗಿ ನಗರದ ಪಟ್ಟಣ ಪೆÇೀಲಿಸ್ ಠಾಣೆಯ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಮಾರಿ ಕೊರೊನಾದಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ ಗಣೇಶ ಉತ್ಸವ ಸಮಿತಿಗಳು, ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೋವಿಡ್ ಲಸಿಕಾ ಕೇಂದ್ರ ತೆರೆಯಲು ಮುಂದಾಗಬೇಕು. ನಗರದ ಪ್ರತಿ ವಾರ್ಡಿನಲ್ಲಿ ಒಂದರಂತೆ ನಾಲ್ಕು ಅಡಿ ಹಾಗೂ ಎರಡು ಅಡಿ ಗಣೇಶ ಪ್ರತಿಮೆ ಪ್ರತಿಷ್ಠಾಪಿಸಲು ಅವಕಾಶವಿದೆ ಎಂದರು.
ಕೊರೊನಾ ಮೂರನೇ ಅಲೆ ಭೀತಿ ಹಿನ್ನಲೆಯಲ್ಲಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದರು. ಗಣೇಶ ಪ್ರತಿಷ್ಠಾಪನೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲನೆ ಮಾಡದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಶೀಲ್ದಾರ ಹೆಚ್.ವಿಶ್ವನಾಥ್ ಅವರು ಮಾತನಾಡಿ, ಗಣೇಶ ಮೂರ್ತಿಗಳ ಪ್ರತಿμÁ್ಟಪನೆಯನ್ನು ಮುಜರಾಯಿ ದೇವಸ್ಥಾನಗಳಲ್ಲಿ ಅನುಮತಿ ಪಡೆದುಕೊಂಡು ಪ್ರತಿμÁ್ಟಪನೆ ಮಾಡಬೇಕು ಎಂದರು.
ಪೌರಯುಕ್ತ ಮನ್ಸೂರು ಅಲಿ, ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಇನ್ಸ್‍ಪೆಕ್ಟರ್‍ಗಳಾದ ಶ್ರೀನಿವಾಸ ಹಾಗೂ ಶ್ರೀನಿವಾಸ ಮೇಟಿ, ಮುಖಂಡರಾದ ಗುಜ್ಜಲ್ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಶ್ರೀಕಾಂತ, ಪಿ.ವೆಂಕಟೇಶ ಇತರರು ಪಾಲ್ಗೊಂಡು ತಮ್ಮ ಸಲಹೆ ನೀಡಿದರು.