ಹೊಸಪೇಟೆಯಲ್ಲಿ ಯುವ‌ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

ಬಳ್ಳಾರಿ, ನ.6: ಜಿಲ್ಲೆಯ ಹೊಸಪೇಟೆ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದು ಬಳ್ಳಾರಿ ನಗರ,ಬಳ್ಳಾರಿ ಗ್ರಾಮಾಂತರ ಮತ್ತು ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಗಳ ಕಾರ್ಯಕಾರಿಣಿ ಸಭೆ ನಡೆಯಿತು.
ಸಭೆಯಲ್ಲಿ ಎಐಸಿಸಿ ಯುವ ಕಾಂಗ್ರೆಸ್ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅನಿಲ್ ಕುಮಾರ್ ಯಾದವ್ ಮಾತನಾಡಿ.‌ ಯವ ಕಾಂಗ್ರೆಸ್ ಪಕ್ಷದ ಅತಿ ಹೆಚ್ಚು ಸಧಸ್ಯತ್ವ ಮಾಡುವುದರ ಮೂಲಕ ಪಕ್ಷವನ್ನು ಸಂಘಟನೆ ಮಾಡಬೇಕೆಂದು ಕರೆ ನೀಡಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್, ಗುಜ್ಜಲ ನಾಗರಾಜ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎನ್.ಮೊಹಮ್ಮದ್ ಇಮಾಮ್, ವಿ .ಸೋಮಪ್ಪ, ನಿಂಬಗಲ್ ರಾಮಕೃಷ್ಣ, ಬಳ್ಳಾರಿ ನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ. ಹನುಮ ಕಿಶೋರ್, ಡಿ.ನಾಗರಾಜ್, ಶರಣ ಬಸವರೆಡ್ಡಿ, ಹಭೀಬ್ ರೆಹಮಾನ್, ಬಿ.ಕೆ. ಅನಂತ, ಎನ್. ಎಸ್ ಯು ಐ ಜಿಲ್ಲಾ ಅಧ್ಯಕ್ಷ ಸಿದ್ಧು ಹಳ್ಳೆಗೌಡ, ಬಾನು ಭೀ, ಲಿಯಾಕತ್ ಅಲಿ, ಬಿ.ಗಣೇಶ, ಶೇಕ್ ತಾಜುದ್ಧೀನ್, ರಾಯಡು, ಲಾಡ್ಲ ಮಶಾಕ, ಜೆ.ಪಿ ಮಂಜುನಾಥ್, ಭರತ್ ಕುಮಾರ್, ವಿನಾಯಕ ಶೆಟ್ಟರ್, ಅಬುಲ್ ಕಲಾಂ ಆಜಾದ್, ಎನ್.ಅಂಕ್ಲೆಶ್ ನಾಯಕ, ತಿಮ್ಮಪ್ಪ ಯಾದವ್, ಗೀತಾ ತಿಮ್ಮಪ್ಪ ಯಾದವ್, ಓಬಳಪತಿ, ಮಾಬಾಷ, ಸಿ.ಸಂತೋಷ ಮೊದಲಾದವರು ಇದ್ದರು.