ಹೊಸಪೇಟೆಯಲ್ಲಿ ಭಾನುವಾರ ಮತ್ತೆ 112 ಜನರಿಗೆ ಕೊರೊನಾ ಪಾಸಿಟೀವ್, 8 ಸಾವು

ಹೊಸಪೇಟೆ ಏ26: ಹೊಸಪೇಟೆ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳದ ಬೆನ್ನಲ್ಲಿಯೇ ನಗರದಲ್ಲಿ ಈ ವರೆಗೂ 8 ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ನಗರದ ಕೋವಿಡ್(ತಾಯಿ ಮತ್ತು ಮಕ್ಕಳ) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರಲ್ಲಿ ಶನಿವಾರ ಒಬ್ಬರು ಮೃತಪಟ್ಟರೆ, ಭಾನುವಾರ ನಾಲ್ಕು ಜನ ಸಾವನಪ್ಪಿದ್ದಾರೆ.
ಕಳೆದ ಏಪ್ರಿಲೇ 1 ರಿಂದ ಇಲ್ಲಿವರಗೆ 8 ಜನ ಕೊರೊನಾ ಸೋಂಕಿತರು ಸಾವನಪ್ಪಿದ್ದಾರೆ. ಬಳ್ಳಾರಿ ಟ್ರಾಮಾ ಕೇರ್ ಸೆಂಟರ್-4 ದೀಪಾಲಿ ಆಸ್ಪತ್ರೆ-2 ನಗರದ ಕೋವಿಡ್(ಎಂಸಿಎಚ್)ಆಸ್ಪತ್ರೆ-2 ಹಾಗೂ ಬೆಂಗಳೂರು ಮಹಾವೀರ ಜೈನ ಆಸ್ಪತ್ರೆ-1 ಸೇರಿ ಇಟ್ಟು ಎಂಟು ಜನರನ್ನು ಕೊರೊನಾ ಬಲಿಯಾದಂತಾಗಿದೆ.
ಪ್ರೆಂಟ್‍ಲೈನ್ ವಾರಿಯರ್ಸ್ ಪೊಲೀಸ ಕುಟುಂಬಗಳಿಗೆ ಕೋವಿಡ್ ಲಸಿಕೆ:
ನಗರದ ಪಟ್ಟಣ ಠಾಣೆಯಲ್ಲಿ ಪೊಲೀಸ್ ಮತ್ತು ಕುಟುಂಬದ ಸದಸ್ಯರಿಗೆ ಭಾನುವಾರ ಕೋವಿಡ್ ಲಸಿಕೆ ಹಾಕಲಾಯಿತು. ಒಟ್ಟು 50 ಪೊಲೀಸ್ ಕುಟುಂಬಗಳಿಗೆ ಕೋವಿಡ್ ಲಸಿಕೆ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ಬೆಳಕಿಗೆ ಬಂದಿದೆ ಮತ್ತು ಭಾನುವಾರ ಹೊಸಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಭಾನುವಾರ 112 ಕೊರೊನಾ ಪಾಸಿಟೀವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 871 ಸಕ್ರಿಯ ಪ್ರಕರಣಗಳು ದಾಖಲಾಗಿವೆ.