ಹೊಸಪೇಟೆಯಲ್ಲಿ ಬುಧುವಾರ ರಾತ್ರಿ ವರುಣನ ಆರ್ಭಟ

ಹೊಸಪೇಟೆ ಜೂ3: ಹೊಸಪೇಟೆ ಸೇರಿದಂತೆ ಸುತ್ತಲೂ ಬುಧವಾರ ರಾತ್ರಿ ವರುಣನ ಆರ್ಭಟವಾಗಿದ್ದು ರಾಯರಕೆರೆ ಸೇರಿದಂತೆ ಅನೇಕ ಕಡೆ ಹೊಲಗದ್ದೆಗಳು ಜಲಾವೃತವಾಗಿದೆ.
ಹೊಸಪೇಟೆ ತಾಲೂಕಿನಾದ್ಯಂತ ಉತ್ತಮ ಹಸಿಮಳೆಯಾಗಿದ್ದು ಭೂಮಿ ತಂಪಾಗಿದೆ. ರಾಯರಕೆರೆ ಒಂದರಲ್ಲಿಯೇ ರೈತರು ಬೆಳೆದ ಭತ್ತ, ಕಬ್ಬು, ಬಾಳೆ, ನವಣೆ, ಮೆಕ್ಕೆಜೋಳ ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿದೆ. ಸಾವಿರಾರು ಏಕರೆ ಪ್ರದೇಶದ ಈ ರಾಯರಕೆರೆ ಸೂತ್ತಲೂ ಗುಡ್ಡಪ್ರದೇಶ ಹೊಂದಿದೆ. ಕೆರೆಯ ಅನೇಕ ವ್ಯಾಪ್ತಿಯಲ್ಲಿಯೂ ರೈತರು ಅನೇಕ ಬೆಳೆಗಳನ್ನು ಬೆಳೆದಿದ್ದು ಸಂಪೂರ್ಣ ಜಲಾವೃತವಾಗಿದೆ.
ಮಳೆ ನೀರು ಹೊರಹೋಗಲು ತೋಪು ಇದ್ದರೂ ನಿರ್ವಹಣೆಯಿಲ್ಲದೆ ಈ ತೋಪು ಬಂದ್‍ಆಗಿದ್ದು ನೀರು ನಿಲ್ಲಲು ಕಾರಣವಾಗಿದೆ ಕಣಿವೆಯ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆನಲ್‍ಗಳನ್ನು ನಿರ್ಮಾಣ ಮಾಡಿದ ನಂತರ ತೋಪುಗಳಿಗೆ ಸ್ವಲ್ಪಮಟಿನ ತೊಂದರೆಯಾಗಿ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲಾ ಈ ಹಿನ್ನೆಲೆಯಲ್ಲಿಯೇ ಮೂರುನಾಲ್ಕ ವರ್ಷಗಳಿಂದ ಪದೆ ಪದೆ ಈ ರೀತಿಯ ತೊಂದರೆಯಾಗುತ್ತಿದೆ ಎನ್ನುತ್ತಾರೆ ಈ ಭಾಗದ ರೈತರು.