ಹೊಸಪೇಟೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾದ ಆಡಳಿತ ಕೋವಿಡ್ ನಿಯಮ ಉಲ್ಲಂಘನೆ 100ಕ್ಕೂ ಅಧಿಕವಾಹನ ಸೀಜ್: ಅಂಗಡಿಗಳ ಮೇಲೂ ಕೇಸ್

ಹೊಸಪೇಟೆ ಮೇ20: ಕರೋನಾ ಲಾಕ್‍ಡೌನ್ ನಿಯಮಾವಳಿಯನ್ನು ಉಲ್ಲಂಘಿಸಿ ಸಂಚಾರ ಮಾಡಿದ 100ಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಿರುವ ಪೊಲೀಸರು ಕೆಲ ಅಂಗಡಿಗಳ ಮೇಲೂ ಕೇಸ್ ದಾಖಲಿಸುವ ಮೂಲಕ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ.
14ದಿನಗಳ ಜನತಾ ಕಪ್ರ್ಯೂ ಮಾದರಿಯ ಲಾಕ್‍ಡೌನ್ ನಡುವೆ ಬಳ್ಳಾರಿ ಜಿಲ್ಲಾಡಳಿತ 5 ದಿನಗಳ ಲಾಕ್‍ಡೌನ್ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ತಡೆಯಲು ಘೋಷಿಸಿದ ಹಿನ್ನೆಲೆಯಲ್ಲಿ ಬುಧುವಾರ 10 ಗಂಟೆಯಿಂದಲೇ ಲಾಕ್‍ಡೌನ್ ಜಾರಿಯಾಗಿದ್ದು ಅಗತ್ಯವಸ್ತು ಸೇರಿದಂತೆ ಯಾವುದೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದಂತೆ ಮಾಡಿದ್ದು ಅನೇಕ ನಿಯಮ ಮೀರಿ ವರ್ತಿಸುತ್ತಿದ್ದು ಅದನ್ನು ತಡೆಯಲು ಪೊಲೀಸರು ಸಂಚಾರ ನಿರ್ಭಂದವಿಧಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಮಧ್ಯಯೂ ಪಾಸ್ ಪಡೆದು ಅನಗತ್ಯವಾಗಿ ತಿರುಗುವ ಹಾಗೂ ಅನುಮತಿ ಇಲ್ಲದೆ ತಿರುಗುವ 100ಕ್ಕೂ ಹೆಚ್ಚು ವಾಹನಗಳನ್ನು ಪಟ್ಟಣ ಪೊಲೀಸ, ಚಿತ್ತವಾಡಿಗಿ, ಬಡಾವಣೆ, ಗ್ರಾಮಾಂತ ಠಾಣೆ, ಕಮಲಾಪುರ, ಹಂಪಿಠಾಣೆಗಳ ಸೇರಿದಂತೆ ಹೊಸಪೇಟೆ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು ಅಲ್ಲದೆ, ನಿಯಮಾವಳಿ ಮೀರಿ ಅಂಗಡಿ ತೆರೆದು ವ್ಯಾಪಾರಕ್ಕೆ ಮುಂದಾದ 4 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬೆಳಗಿನ ವಾಯುವಿಹಾರ, ಹಾಲು ಹಣ್ಣು ತರಲು ಹೋಗುತ್ತಿದ್ದೇವೆ, ನಗರದ ವಿವಿಧ ಬಡಾವಣೆಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವ ಹಾಗೂ ಅನಗತ್ಯವಾಗಿ ತಿರುಗಾಡುವವರನ್ನು ಓಣಿ ಓಣಿಗಳಲ್ಲಿ ಹೊಕ್ಕು ಠಾಣೆಯಲ್ಲಿ ಕುಡಿಸುವ ಕೆಲಸ ಆರಂಭಿಸಿದ ಪೊಲೀಸರು 20ಕ್ಕೂ ಹೆಚ್ಚು ಜನರನ್ನು ಕರೆತಂದು ಕೂಡಿಸಿದ್ದಾರೆ.
ನಾನು ಮಾಡುತ್ತಿರುವುದು ಜನರ(ನಿಮ್ಮ) ಜೀವ ಉಳಿಸಲು ಅರ್ಥಮಾಡಿಕೊಳ್ಳಿ ಎಂದು ಕೈಮುಗಿದು ಸಹ ಕೇಳುವ ಮೂಲಕ ಕರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿ ಎಂದು ಕೋರುತ್ತೇವೆ. ಇಷ್ಟಕ್ಕೂ ಬಗ್ಗದಿದ್ದರೆ ಕೇಸ್ ಹಾಕುತ್ತೇವೆ.
ಶ್ರೀನಿವಾಸ
ಇನ್ಸ್‍ಪೇಕ್ಟರ್ ಪಟ್ಟಣ ಪೊಲೀಸ್‍ಠಾಣೆ.

ಕಳೆದ ಬಾರಿಯಂತೆ ಹೋಮ್ ಐಸೋಲೇಷನ್ ಇರುವವರ ಕೈಗೆ ಶೀಲ್ ಹಾಕಬೇಕು ಮತ್ತು ಮನೆಗಳ ಮುಂದೆ ಸ್ಟೀಕರ್ಸ್ ಅಂಟಿಸಬೇಕು ಅಂದಾಗ ಮಾತ್ರ ಸೋಂಕು ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ.
ಭೂಪಾಳ ಪ್ರಹ್ಲಾದ್
ಹೊಸಪೇಟೆ
.