ಹೊಸಪೇಟೆಯಲ್ಲಿ ನವಲಿ ಹಿರೇಮಠ ಸ್ವಾಮಿಗಳ ಪುಣ್ಯಸ್ಮರಣೆ


ಹೊಸಪೇಟೆ ನ 22 : ಅಲ್ಲಿಪುರ ಮಹಾದೇವ ತಾತರ ಪ್ರೀತಿಯ ಶಿಷ್ಯರಾಗಿದ್ದ ಸಿದ್ಧಲಿಂಗ ಸ್ವಾಮಿಗಳು ಮಠದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ವಿರಶೈವ ಮಹಾಸಭಾ ಅಧ್ಯಕ್ಷರಾದ ಸಾಲಿಸಿದ್ಧಯ್ಯ ಅವರು ಮಾತನಾಡಿದರು.
ನಗರದ ತಾಲೂಕು ಕಚೇರಿ ಎದುರಿನ ಖಾಸಗಿ ಸಭಾಂಗಣದಲ್ಲಿ ಶನಿವಾರ ನಡೆದ ಹಂಪಸಾಗರ ನವಲಿ ಹಿರೇಮಠ ಸಿದ್ಧಲಿಂಗಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ಮಠದ ನಿರ್ಮಾಣಕ್ಕಾಗಿ ಅಧಿಕಾರಿಗಳು ಕಲೆಕ್ಟರ್ ಮೂಲಕ ಜಾಗವನನ್ನು ನೀಡಿದ್ದರು. ಅದು ಸ್ವಾಮಿಗಳ ಮೇಲಿನ ಅಭಿಮಾನಕ್ಕಾಗಿ, ಅದಲ್ಲದೇ ಅಲ್ಲಿಪುರ ಮಹದೇವ ತಾತರ ಪ್ರೀತಿಯ ಶಿಷ್ಯರಾಗಿದ್ದರು ಎಂದು ಕಾರ್ಯಕ್ರಮದಲ್ಲಿ ಸ್ವಾಮಿಗಳನ್ನು ನೆನೆಸಿಕೊಂಡರು.
ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯದವರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಹಾಗೂ ಕೊಂಡನಾಯಕನಹಳ್ಳಿ ಕಲಾಬಳಗದವರು ಸಂಗೀತ ಸೇವೆಯನ್ನು ಅರ್ಪಿಸಿದರು.
ಸಿದ್ಧಲಿಂಗಸ್ವಾಮಿಗಳ ಜೀವನದ ಮಹತ್ವಪೂರ್ಣ ಘಟನೆಗಳನ್ನು ಕೆಲಭಕ್ತರು ಹಂಚಿಕೊಂಡರು.
ನಿವೃತ್ತ ಪ್ರಾಂಶುಪಾಲರಾದ ಡಾ.ಕೆ ಪನ್ನಂಗಧರ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾ‌.ಸಂಗನಬಸವ ಮಹಾಸ್ವಾಮಿಗಳು, ಕರಿಸಿದ್ಧೇಶ್ವರ ಮಹಾಸ್ವಾಮಿಗಳು, ಕಿಶೋರ್ ಕುಮಾರ್, ಶಿವಕುಮಾರಸ್ವಾಮಿ ಸಾರಂಗಮಠ ಸೇರಿದಂತೆ ವೀರಶೈವ ಸಮುದಾಯದವರು ಇದ್ದರು