ಹೊಸಪೇಟೆಯಲ್ಲಿ ಜುಲೈ 29 ರಿಂದ ಜಂಪ್‍ರೋಪ್ ರಾಷ್ಟ್ರೀಯ ಕ್ರೀಡಾಕೂಟ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು, 10: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ತನ್ನ ಬೆಳ್ಳಿ ಹಬ್ಬದ ಪ್ರಯುಕ ್ತಜಂಪ್‍ರೋಪ್ ಫೆಡರೇಷನ್ ಆಪ್ ಇಂಡಿಯಾ, ಜಂಪ್‍ರೋಪ್ ಅಸೋಶಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದಲ್ಲಿ ಜುಲೈ 29, 30 ಮತ್ತು 31 ರಂದು 19ನೇ ರಾಷ್ಟ್ರೀಯ ಸಬ್-ಜ್ಯೂನಿಯರ್ ಜಂಪ್‍ರೋಪ್ ಚಾಂಪಿಯನ್ ಶಿಫ್, 18ನೇ ರಾಷ್ಟ್ರೀಯ ಫೆಡರೇಷನ್ ಕಫ್ ಹಾಗೂ 36 ಗಂಟೆಗಳ ನಿರಂತರ “ಡಬಲ್ ಡಚ್” ವಿಶ್ವದಾಖಲೆಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ ಹಿರೇಮಠ ತಿಳಿಸಿದ್ದಾರೆ.
ಹೊಸಪೇಟೆಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು  ಜಂಪ್‍ರೋಪ್ ಹೊಸ ಹೆಸರಾದರೂ ನಮ್ಮ ಭಾರತೀಯ ಸಂಸ್ಕøತಿಯ ಪುರಾತನಕ್ರೀಡೆ“ಹಗ್ಗದಾಟ”ವೇ ಆಗಿದೆ. ದೈಹಿಕಕ್ಷಮತೆ ವೃದ್ದಿಸುವ ಮೂಲಕ ನಮ್ಮ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುವ ಈ ಹಗ್ಗದಾಟಇಂದುತನ್ನ ಸ್ವರೂಪವನ್ನು ಬದಲಾಯಿಸುವ ಮೂಲಕ “ಜಂಪ್‍ರೋಪ್” ಆಗಿ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಲು ಭಾರತೀಯರಾದ ನಾವು ಹೆಮ್ಮೆಪಡುತ್ತೇವೆ.
ಅಂತರಾಷ್ಟ್ರೀಯ ಮಟ್ಟ, ರಾಷ್ಟ್ರಮಟ್ಟ ಸೇರಿದಂತೆ ತನ್ನದೆಆದ ಪರಂಪರೆಯೊಂದಿಗೆ ಬೆಳೆಯುತ್ತಿರುವ ಈ ಕ್ರೀಡೆ ಇಂದು ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಮಾನ್ಯತೆ ಪಡೆಯುವ ಮೂಲಕ ಜನ ಮಾನಸದಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡಿದೆ.
ಆತಿಥ್ಯೆಯ ಕರ್ನಾಟಕ ಸೇರಿದಂತೆ, 18 ರಾಜ್ಯಗಳ ತಂಡಗಳು ಭಾಗವಹಿಸಲು ಈಗಾಗಲೇ ಸಮ್ಮತಿಸಿದ್ದು, ಇನ್ನಷ್ಟು ರಾಜ್ಯಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದಾಜು 500 ಸಬ್-ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಕ್ರೀಡಾಪಟುಗಳು ವಿಶ್ವ ದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ವರ್ಷದ 365 ದಿನವೂ ರಜೆ ರಹಿತವಾಗಿ,  ಹೊಸ ಹೊಸ ತಾಂತ್ರಿಕ ಸೇವೆಗಳನ್ನು ನೀಡುವ ಮೂಲಕ ಹೊಸ ಪೀಳಿಗೆಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ತನ್ನ ಬೆಳ್ಳಿ ಹಬ್ಬವನ್ನು ವರ್ಷದ 365ದಿನವೂ ದಿನಕ್ಕೊಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಅಪೂರ್ವ ದಾಖಲೆಗೆ ಅಣಿಯಾಗಿದ್ದು ಒಂದಡೆಯಾದರೆ ಮತ್ತೊಂದಡೆತನ್ನ ಬೆಳ್ಳಿಹಬ್ಬದ ಸವಿನೆನಪಿಗಾಗಿ ಜಂಪ್‍ರೋಪ್‍ಕ್ರೀಡೆಯಲ್ಲಿವಿಶ್ವದಾಖಲೆ ನಿರ್ಮಾಣ ಮಾಡಲು ಯೋಚಿಸಿ
ವಿಶ್ವದಾಖಲೆಯ ಅವಿಸ್ಮರಣೀಯಕ್ಷಣ : 36 ಗಂಟೆಗೆ ವಿಶ್ವದಾಖಲೆಕ್ಷಣ ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ದಾಖಲಾಗಲಿದೆ. ಸದ್ಯ ಇರುವ “ಡಬಲ್ ಡಚ್” 24 ಗಂಟೆಯ ದಾಖಲೆಯನ್ನ ಸುಧಾರಿಸಿ, ನಿರಂತರ 36 ಗಂಟೆಗಳ ದಾಖಲೆ ಸೃಷ್ಠಿಸಲಾಗುವುದು.
ಈ ಕ್ರೀಡಾಕೂಟದಲ್ಲಿ ವಿಜಯನಗರ ಜಿಲ್ಲಾಡಳಿತವೂ ಭಾಗಿಯಾಗಬೇಕು ಎಂಬ ಅನಿಸಿಕೆಯೊಂದಿಗೆ ಇಂತಹ ಅಭೂತಪೂರ್ವ ಕ್ಷಣವನ್ನು ನೂತನ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಫೇಡರೇಷನ್ ನಿರ್ದೇಶಕ ಅನಂತ ಜೋಶಿ, ವಿಕಾಸ ಬ್ಯಾಂಕ್ ನಿರ್ದೇಶಕ ಎಂ.ವೆಂಕಪ್ಪ, ಅಸೋಶಿಯೇಷನ್ ನಿರ್ದೇಶಕ ರಾಘವೇಂದ್ರ ಜಮಖಂಡಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್‍ರಜಾಕ್, ಬ್ಯಾಂಕ್ ವ್ಯವಸ್ಥಾಪಕ ಗವಿಸಿದ್ದಪ್ಪ ಹಾಜರಿದ್ದರು.