ಹೊಸಪೇಟೆಯಲ್ಲಿ ಕೋವಿಡ್ ಪತ್ತೆಗಾಗಿ ವಾರ್ಡ್ ಸಮೀಕ್ಷೆ

ಹೊಸಪೇಟೆ, ಮೇ.01: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೆ, ದಿನೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರದಿಂದ ನಗರದಲ್ಲಿ ವಾರ್ಡ್‍ವಾರು ಕೋವಿಡ್ ಸಮೀಕ್ಷೆ ಆರಂಭವಾಗಿದೆ.
ನಗರಸಭೆ ಅಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ತಂಡ ನಗರದ 35 ವಾರ್ಡುಗಳಲ್ಲಿ ಸಮೀಕ್ಷೆ ನಡೆಸಿ. ಪ್ರತಿ ಮನೆಗೆ ತೆರಳಿ ಕೋವಿಡ್ ಸಮೀಕ್ಷೆ ನಡೆಸುತ್ತಿದೆ. ಜ್ವರ, ಕೆಮ್ಮು, ನೆಗಡಿ ಸೇರಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಒಂದೊಮ್ಮೆ ಅವರಿಗೆ ಕೋವಿಡ್ ಗುಣಲಕ್ಷಣ ಕಂಡು ಬಂದಲ್ಲಿ ಅವರಿಗೆ ಮನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಕ್ರಮವಹಿಸುವ ಸಂಬಂಧ ಸಮೀಕ್ಷೆ ನಡೆಸಲಾಗುತ್ತಿದೆ. ಕೈಗೊಳ್ಳಲಾಗುತ್ತಿದೆ.
ಕೋವಿಡ್ ಸೋಂಕಿನ ತೀವ್ರತೆಯಿಂದ ಬಳಲುತ್ತಿದ್ದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗುತ್ತಿದೆ. ಜತಗೆ ಕೋವಿಡ್ ಸೋಂಕಿತರ ಏರಿಯಾ ಹಾಗೂ ಮನೆಗಳನ್ನು ಸೀಲ್‍ಡೌನ್ ಮಾಡಲಾಗುತ್ತಿದೆ. ಸೋಂಕಿತರು ಮನೆಯಿಂದ ಹೊರ ಬರದಂತೆ ಸಲಹೆ ನೀಡಲಾಗುತ್ತಿದೆ. ಆರೋಗ್ಯದಲ್ಲಿ ಏರುಪೇರು ಏನಾದರೂ ಕಂಡು ಬಂದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಂಬರ್‍ಗೆ ಕಾಲ್ ಮಾಡುವಂತೆ ಸೂಚಿಸಲಾಗುತ್ತಿದೆ. ಕೆಲವರು ಸಣ್ಣ ಜ್ವರ ಎಂದು ತಾತ್ಸರದಿಂದ ಹತ್ತಾರು ಕಳೆದ ಮೇಲೆ ಆಸ್ಪತ್ರೆಗೆ ಬಂದು ದಾಖಲು ಆಗುತ್ತಿರುವುದು, ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಿಮಿಸಿದೆ. ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಸಭೆ ನಡೆಸಿ, ವಾರ್ಡ್‍ವಾರು ಸಮೀಕ್ಷೆ ನಡೆಸಿ, ಕೋವಿಡ್ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರಿಗೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಸ್ಯಾನಿಟೈಜರ್:
ನಗರದ ಕೆಲ ಪ್ರಮುಖ ರಸ್ತೆ ಹಾಗೂ ವಾರ್ಡ್‍ಗಳಲ್ಲಿ ನಗರಸಭೆ ವಾಹನದ ಮೂಲಕ ಸ್ಯಾನಿಟೈಜರ್ ಮಾಡಲಾಗುತ್ತಿದೆ. ನಗರದ ಸ್ಟೇಶನ್ ರಸ್ತೆ, ನಾನಾ ಕಡೆಗಳಲ್ಲಿ ಸ್ಯಾನಿಟೈಜರ್ ಮಾಡಲಾಯಿತು. ಸೋಂಕಿನ ಪ್ರಮಾಣ ಹೆಚ್ಚಿರುವ ಕಡೆಗಳಲ್ಲಿ ನಿರಂತರ ಸ್ಯಾನಿಟೈಜರ್ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.