ಹೊಸಪೇಟೆಯಲ್ಲಿ ಕನ್ನಡೇತರ ನಾಮಫಲಕಕ್ಕೆ ಮಸಿ

ಹೊಸಪೇಟೆ ನ 04 : ನಗರದಲ್ಲಿ ನಿನ್ನೆ ಅಂಗಡಿ‌ಮಳಿಗೆಗಳ ಕನ್ನಡೇತರ ನಾಮಫಲಕಗಳಿಗೆ ನಗರಸಭೆ ಸಿಬ್ಬಂದಿ ಕಪ್ಪು ಮಸಿ ಬಳೆಯುವುದನ್ನು ಆರಂಭಿಸಿದೆ.
ನಿನ್ನೆ ದಿನ 40 ಮಳಿಗೆಗಳ ನಾಮಫಲಕಗಳಿಗೆ ಮಸಿ ಬಳೆಯಲಾಗಿಸೆ. ನ. 2ರ ಒಳಗೆ ಕನ್ನಡ ನಾಮಫಲಕ ಹಾಕುವಂತೆ ನಗರಸಭೆಯ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ಇತ್ತೀಚೆಗೆ ಕನ್ನಡೇತರ ನಾಮಫಲಕ ಹೊಂದಿದ ಮಳಿಗೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು.
ನೋಟಿಸ್‌ ಕೊಟ್ಟರೂ ಕನ್ನಡ ನಾಮಫಲಕ ಅಳವಡಿಸದ ಕಾರಣ ಮಸಿ ಬಳಿಯಲಾಗುತ್ತಿದೆ.
ಆರೋಗ್ಯ ಇನ್‌ಸ್ಪೆಕ್ಟರ್‌ ವೆಂಕಟೇಶ ಹವಾಲ್ದಾರ, ಸಿಬ್ಬಂದಿ ಸತ್ಯನಾರಾಯಣ ಶರ್ಮಾ, ಮಾರುತಿ, ರಾಮಾಂಜನೇಯ, ನಾಗರಾಜ, ವೆಂಕಟೇಶ, ತಿಮ್ಮಯ್ಯ, ಬಾಬು ಇದ್ದರು.