ಹೊಸಪೇಟೆಯಲ್ಲಿ ಒಂದೇ ಕಾಲಿಗೆ ಒಂಬತ್ತು ಬೆರಳವುಳ್ಳ ಮಗು ಜನನ.

ಹೊಸಪೇಟೆ ಮೇ 26:ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ 9 ಬೆರಳವುಳ್ಳ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿ ಅಚ್ಚರಿ‌ ಮೂಡಿಸಿರುವ ಘಟನೆ ಜರುಗಿದೆ.
ಗಂಡು ಮಗುವಿನ ಎಡಗಾಲಿಗೆ ಒಂಬತ್ತು ಬೆರಳುಗಳಿವೆ. ಆದರೆ, ಬಲಗಾಲಿಗೆ ಸಾಮಾನ್ಯವಾಗಿರುವಂತೆ ಐದು ಬೆರಳುಗಳಿವೆ. ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ತಾಯಿ ಹೊಸಪೇಟೆ ತಾಲೂಕಿನ‌ ನಿವಾಸಿಗಳಾಗಿದ್ದಾರೆ. ಆದರೆ, ತಾಯಿ ಹೆಸರು ಹಾಗೂ ವಿಳಾಸವನ್ನು ಬಹಿರಂಗ ಪಡಿಸಲು ಕುಟುಂಬಸ್ಥರು ಒಪ್ಪಿಲ್ಲ. ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20 ನೇ ಕೇಸ್, ಒಂಬತ್ತು ಬೆರಳುವುಳ್ಳ‌ ಮಗು ಜನ್ಮತಾಳುವುದು ತೀರಾ ಕಡಿಮೆ. ಅಲ್ಲದೇ, ಬೆರಳು ಇರುವುದು ಮುಂಚಿತವಾಗಿ ತಿಳಿಯುವುದಿಲ್ಲ. ಜನನವಾದ ಬಳಿಕ ಅದು ತಿಳಿಯಲಿದೆ ಎನ್ನುತ್ತಾರೆ ವೈದ್ಯರು. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.