ಹೊಸಪೇಟೆಯಲ್ಲಿ ಎರಡನೇ ದಿನವೂ ಮುಂದುವರೆದ ಮಳೆಯ ಆರ್ಭಟ: ಅಪಾರ ಬೆಳೆ ಹಾನಿ.

ಹೊಸಪೇಟೆ ಜೂ4: ಸತತ ಎರಡನೇಯ ದಿನವೂ ಮುಂದುವರೆದ ಮಳೆಯ ಹೊಡೆತಕ್ಕೆ ಬೆಳೆ ನಾಶ ಸೇರಿದಂತೆ ವಿದ್ಯುತ್ ಕಂಬಗಳು ಧರೆಗೂರುಳಿ ಅಪಾರ ಹಾನಿಯಾಗಿದೆ.
ನಿನ್ನೆ ಸಂಜೆ ಮತ್ತು ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೂರಾರು ಎಕರೆ ಬೆಳೆ ಹಾನಿ ತಾಲೂಕಿನ ಹೊಸೂರು, ಕರೆಕಲ್ಲು, ಇಪ್ಪಿತೇರಿ ಮಾಗಾಣಿಗಳು ಸೇರಿದಂತೆ ಕಮಲಾಪುರ, ಹಂಪಿ ಭಾಗದಲ್ಲಿ ನೂರಾರು ಏಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಬೆಳೆ ನಾಶವಾಗಿದೆ. ಮಳೆಯ ಜೊತೆಗೆ ಬಿಸಿದ ಭಾರಿ ಗಾಳಿಗೆ ಬಾಳೆ ಬೆಳ ನಾಶವಾಗಿದೆ ಬಾಳೆ ಬೆಳೆದ ರೈತರು ದಿಢೀರ ಹಾನಿಯಂದಾಗಿ ಕಂಗಾಲಾಗಿದ್ದಾರೆ.

ಧರೆಗುರುಳಿದ ವಿದ್ಯುತ್ ಕಂಬಗಳು
ಹೊಸಪೇಟೆ ತಾಲೂಕಿನ ಕಾರಿಗನೂರು ಮತ್ತು ಮಲಪನಗುಡಿಗೆ ಹೋಗುವ ರಸ್ತೆಯಲ್ಲಿ 13 ಕಂಬಗಳು ನೆಲಕ್ಕೆ ಉರುಳಿವೆ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬಿದ್ದ ವಿದ್ಯುತ್ ಕಂಬಗಳು ಸಾಲುಗಟ್ಟಿ ರಸ್ತೆಯಲ್ಲಿ ನೆಲಕ್ಕೂರುಳಿವೆ. ಇದರಿಂದ ಈ ಭಾಗದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು