ಹೊಸಪೇಟೆಯಲ್ಲಿ ಅಂಗನವಾಡಿಯ 8ನೇ ರಾಜ್ಯ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ3: ಅಸಂಘಟಿತ ಕಾರ್ಮಿಕರು ಆಗಿರುವ ಅಂಗನವಾಡಿ ಕಾರ್ಯಕರ್ತರನ್ನು ವ್ಯವಸ್ಥಿತ ಮುಗಿಸುವ ಹುನ್ನಾರ ಸರ್ಕಾರಗಳ ಮಾಡುತ್ತೀವೆ ಇದನ್ನು ತಡೆಯಲು ಹೋರಾಟದ ರೂಪುರೇಷೆಗಳನ್ನು ಸೆ 9 ರಿಂದ 11ರವರೆಗೂ ನಡೆಯುವ ರಾಜ್ಯ ಸಮ್ಮೇಳನದಲ್ಲಿ ತಿರ್ಮಾನಿಸಲಾಗುವುದು ಎಂದು ಕಾರ್ಯಾಧ್ಯಕ್ಷೆ ಕೆ.ನಾಗರತ್ನಮ್ಮ ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಅಂಗನವಾಡಿ ಬಲಗೊಳಿಸುವುದಾಗಿ ಹೇಳಿ 40%ಅನುದಾನ ಕಡಿತಗೊಳಿಸುತ್ತಿವುದು ಅಕ್ಷಮ್ಯ ಎಂದು ಇದನ್ನು ಖಂಡಿಸುವುದು ಸೇರಿದಂತೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ, ನೀರು ಪ್ರಯಾಣದರ ಹೆಚ್ಚಳ ಇಂತಹವುಗಳ ತಡೆಗೆ ಬದ್ದವಾಗಬೇಕಾಗಿರುವ ಸರ್ಕಾರ ಇಂದು ಉದಾರಿಕರಣ ಹಿನ್ನೆಲೆಯಲ್ಲಿ ಕಡಿವಾಣ ಮಾಡುತ್ತಿರುವುದನ್ನು ಖಂಡಿಸುವುದು ಸೇರಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣ ರಕ್ಷಣೆಗೆ
ಹೋರಾಟ ರೂಪಿಸಲು ಸಮ್ಮೇಳನದಲ್ಲಿ ನಿರ್ಣಯಿಸಲಾಗುವುದು.
ರಾಜ್ಯದ 31ಜಿಲ್ಲೆಯ 1ಸಾವಿರ ಕಾರ್ಯಕರ್ತರು ಪಾಲ್ಗೊಳಲಿದ್ದಾರೆ. ಸೆಪ್ಟೆಂಬರ್ 9ರಿಂದ 11ರವರಗೂ ನಡೆಯುವ ಸಮ್ಮೇಳನದ ಭಾಗವಾಗಿ ಹೊಸಪೇಟೆಯ ಸಹಕಾರಿ ಕಲ್ಯಾಣ ಮಂಟಪದಲ್ಲಿ ಗೋಷ್ಠಿಗಳು, ಐಎಸ್ ಆರ್ ರಸ್ತೆಯ ಈದ್ಗಾ ಮೈದಾನದ ಹತ್ತಿರ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.
ಸಾಹಿತ್ಯಿ ಕು.ವೀರಭದ್ರಪ್ಪ
ಅಖಿಲ ಭಾರತ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿಂಧೂ, ರಾಜ್ಯ ಮುಖಂಡರಾದ ವರಲಕ್ಷ್ಮಿ  ಸೇರಿದಂತೆ ಅನೇಕರು ಪಾಲ್ಗೊಳಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್ ಭಾಸ್ಕರ ರೆಡ್ಡಿ, ಯು. ಬಸವರಾಜ, ಬಿ.ಉಮಾದೇವಿ, ಎ ಮಲ್ಲಮ್ಮ,  ಗೋಪಾಲ, ಸುನೀತಾ, ಶಕುಂತಲಾ, ಮಂಜು, ಜಂಬಯ್ಯನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Attachments area