ಹೊಸಪೇಟೆಗೆ ಬಂದ ಡಿ.ಕೆ.ಶಿವಕುಮಾರ್ಕಾರ್ಯಕರ್ತರಿದ್ದ ಅದ್ದೂರಿ ಸ್ವಾಗತ

ಬಳ್ಳಾರಿ ನ 22 : ಕೆ.ಪಿ.ಸಿ.ಸಿ ಸಾರಥ್ಯ ವಹಿಸಿಕೊಂಡ ಮೇಲೆ ಜಿಲ್ಲೆಗೆ ಮೊದಲ ಬಾರಿಗೆ ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೈಗೊಂಡರು.ಬೆಂಗಳೂರಿನಿಂದ ಹೊಸಪೇಟೆಗೆ ಬಂದ ಅವರನ್ನು ಇಂದು ಮಧ್ಯಾಹ್ನ ಗೂಂಡಾ ಅರಣ್ಯದ ಬಳಿಯೇ ನೂರಾರು ಕಾರಗಯಕರ್ತರು, ಮುಖಂಡರು ಹೂ ಮಾಲೆ ಹಾಕಿ ಬೈಕ್ ರ‌್ಯಾಲಿ ಮೂಲಕ ಆಹ್ವಾನಿಸಿದರು.ಕೋವಿಡ್ ಇದ್ದರೂ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಅವರ ಪರ ಘೋಷಣೆಗಳನ್ನು ಕೂಗುತ್ತ ರ‌್ಯಾಲಿ ಸಾಗಿ‌ಬಂತು. 50 ಕ್ಕೂ  ಹೆಚ್ಚು ಕಾರುಗಳು ಅವರನ್ನು ಹಿಂಬಾಲಿಸಿದ್ದವು.
ಹೊಸಪೇಟೆಗೆ ಬಮನದ ಮೇಲೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿದರು. ಪಕ್ಷಕ್ಕೆ ಸೇರಿದ ಜಿಲ್ಲೆಯ ಶಾಸಕರುಗಳಾದ ಬಿ.ನಾಗೇಂದ್ರ, ಭೀಮಾನಾಯ್ಕ, ತುಕರಾಂ, ಪರಮೇಶ್ವರ ನಾಯ್ಕ, ವಿಧಾನ ಪರಿಷತ್ ಸದಸ್ಯರುಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ನ್ರ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ವಿಧಾನ‌ಪತಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ ಸೇರಿಂದತೆ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮುಖಂಡರು ಪಾಲ್ಗೊಂಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಬಿಐ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿ  ಬಿಜೆಪಿ ಅವರು ಮೊದಲಿಂದ ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಅದರಿಂದ ಯಶಸ್ಸು ಕಂಡಿದ್ದಾರೆ ಎಂದರು. ಉಪಚುನಾವಣೆ ಹಿನ್ನೆಲೆ ಪ್ರವಾಸ ಮಾಡಲಾಗುತ್ತಿದೆ. ಹೊಸಪೇಟೆ ಕಾರ್ಯಕರ್ತರ ಸಭೆ ಮುಗಿಸಿಕೊಂಡು, ಮಸ್ಕಿ ಕ್ಷೇತ್ರಕ್ಕೆ ತೆರಳುತ್ತೇನೆ. ಇದಾದ ಬಳಿಕ ಬಸವಕಲ್ಯಾಣದಲ್ಲಿ ಕಾರ್ಯಕ್ರಮವಿದೆ.‌ ಮುಂದೆ ಗ್ರಾಮ ಪಂಚಾಯತ್​ ಚುನಾವಣೆ ಬರಲಿದ್ದು, ಅದರ ಸಿದ್ಧತೆಗಾಗಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಡಿಕೆಶಿ ಹೇಳಿದರು.