ಹೊಸನಗರ ಪಟ್ಟಣಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು

 ಹೊಸನಗರ.ಜೂ.೮; ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ ವೆಲ್‌ನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನಲೆ ನೀರು ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿರುವ ಕಾರಣ ಎಲ್ಲಾ 11 ವಾರ್ಡ್ಗಳಿಗೂ ಎರಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪ.ಪಂ.ಸದಸ್ಯ ಕೆ.ಕೆ.ಅಶ್ವಿನಿಕುಮಾರ್ ತಿಳಿಸಿದರು.ಪಟ್ಟಣಕ್ಕೆ ಕುಡಿಉವ ನೀರುಣಿಸುವ ಶರಾವತಿ ನದಿಯ ಹಿನ್ನೀರ ಪ್ರದೇಶದಲ್ಲಿ ಮಳೆಯಾಗದ ಕಾರಣ ನೀರಿನ ಒರತೆ ಬತ್ತಿಹೋಗಿದ್ದು, ಬರೀ ಉಸುಕು ಮಯವಾಗಿದೆ. ಮರಳು ಮತ್ತು ಕೆಸರು ಜಾಕ್‌ವೆಲ್‌ನಿಂದ ಮೇಲೆತ್ತುವ ಕಾರ್ಯ ಚಾಲ್ತಿಯಲ್ಲಿದೆ.ಈ ಸಂಬAಧ ಜೂ.7ರಿಂದ 10ರ ವರೆಗೆ ದುರಸ್ಥಿ ಕಾರ್ಯಕೈಗೊಂಡಿದ್ದು, ಈ ವೇಳೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಮನೆಗೆ ಕನಿಷ್ಟ ಒಂದು ಬ್ಯಾರಲ್ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮಕೈಗೊಂಡಿದ್ದು ಜನತೆ ಸಹಕರಿಸುವಂತೆ ಅವರು ಕೋರಿದ್ದಾರೆ.ಚಿತ್ರ; 8ಹೆಚ್‌ಎಸ್‌ಪಿ2; ಹೊಸನಗರ ಪಟ್ಟಣದಲ್ಲಿ ಟ್ಯಾಂಕರ್ ಮೂಲಕ ಪ್ರತಿ ಮನೆಗೆ ನೀರು ಸರಬರಾಜು ಮಾಡುತ್ತಿರುವುದು.