ಹೊಸದುರ್ಗ ಕುಂಚಿಟಿಗ ಮಠಕ್ಕೆ ಚಿದಾನಂದಗೌಡ ಭೇಟಿ

ಮಧುಗಿರಿ, ನ. ೧೮- ನೂತನ ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡ ರವರು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕಾಯಕ ಯೋಗಿ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿಯವರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ರವರ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ಪಕ್ಷ ಹಾಗೂ ಗುರುಪೀಠ ಮತದಾರರ ಋಣ ತೀರಿಸುತ್ತೇನೆ. ಬಿಜೆಪಿ ಪಕ್ಷ ಎಂದರೆ ಅದೊಂದು ಸಂಘಟನೆ ಮಾತ್ರ ಅಲ್ಲ, ಅದು ನಮ್ಮ ಕುಟುಂಬ ಎಂದರು.
ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಪಕ್ಷದ ಅಧ್ಯಕ್ಷರು, ಸಂಸದರು, ಶಾಸಕರು, ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರು ಪದವೀಧರರ ಆಶೀರ್ವಾದಿಂದ ನಾನು ಗೆದ್ದಿದ್ದೇನೆ. ಇದು ನಿಮ್ಮ ಸೇವೆಗೆ ಮೀಸಲು ಎದುರು. ನಾನು ಚುನಾವಣೆಯ ಪೂರ್ವದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಂದು ಶಾಂತವೀರಶ್ರೀಗಳು ನನಗೆ ಟಿಕೆಟ್ ಕೊಡಿಸಲು ತಮ್ಮ ಎಲ್ಲ ಪ್ರಯತ್ನ ಮಾಡಿ ಮುಖ್ಯಮಂತ್ರಿಗಳ, ಮಂತ್ರಿಗಳ, ಮುಖಂಡರ ಮನೆಗೆ ಹಾಗೂ ಪಕ್ಷದ ಸಂಘಟನೆಯ ಹಿರಿಯರ ಮನೆಗೆ ಬಂದು ನನಗಾಗಿ ಶ್ರಮಪಟ್ಟಿದ್ದಾರೆ. ಅವರ ಮಾರ್ಗದರ್ಶನ ನನಗೆ ಆತ್ಮವಿಶ್ವಾಸ ತುಂಬಿದೆ. ಸೇವೆ ಮಾಡಲು ಅವಕಾಶ ಕೊಟ್ಟ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ಸ್ಪಂದಿಸುವೆ. ಭದ್ರಾ ಮೇಲ್ದಂಡೆ, ರೈಲು ಸಂಪರ್ಕ, ಮೂಲಭೂತ ಸೌಕರ್ಯಕ್ಕೆ ಸರ್ಕಾರದ ಹಂತದಲ್ಲಿ ಶಾಸಕರ ಜತೆ ದುಡಿಯುವುದಾಗಿ ತಿಳಿಸಿದರು.
ಕೋಡಿಹಳ್ಳಿ ತಮ್ಮಣ್ಣ ಮಾತನಾಡಿ, ಕಳೆದ ವರ್ಷ ಕುಂಚಿಟಿಗ ಮಠದಲ್ಲಿ ನಡೆದ ದೀಪಾವಳಿಯ ಹಬ್ಬದಂದು ಶಾಂತವೀರ ಗುರುಗಳ ಮುಂದೆ ತಮ್ಮ ಅಪೇಕ್ಷೆ ವ್ಯಕ್ತಪಡಿಸಿದ ಚಿದಾನಂದಗೌಡರು ಗುರುಪೀಠದ ಆಶೀರ್ವಾದಿಂದ ಪದವೀಧರರ ಆಶೀರ್ವಾದಿಂದ ಗೆದ್ದಿದ್ದಾರೆ. ಅವರಲ್ಲಿ ಉತ್ಸವ ಕೆಲಸ ಮಾಡುವ ಮನೋಭಾವ ಇದೆ. ಅವರಿಂದ ಜಿಲ್ಲೆಗೆ ಒಳ್ಳೆಯದಾಗಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಹೊಳಲ್ಕೆರ ವಕೀಲ ಸಂಘದ ಅಧ್ಯಕ್ಷ ರಂಗಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಶಿವಕುಮಾರ್, ಸಂತೋಷ್, ನವೀನ್, ಈಶ್ವರ ದಗ್ಗೆ, ಅರಣ್, ಶ್ರೀನಿವಾಸ್, ವಕೀಲ ಜಗದೀಶ್, ಅಜ್ಜಪ್ಪ, ವಸಂತಕುಮಾರ ಮತ್ತಿತರರು ಉಪಸ್ಥಿತರಿದ್ದರು.