ಹೊಸದಾಗಿ 50 ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವುದು ಬೇಡ

ಕಲಬುರಗಿ,ಮಾ.23-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ) ವಿಶೇಷ ಅನುದಾನದಲ್ಲಿ 50 ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವುದನ್ನು ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ ಆಗ್ರಹಿಸಿದೆ.
ಈ ಸಂಬಂಧ ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರಿಗೆ ಮನವಿಪತ್ರ ಸಲ್ಲಿಸಿರುವ ಸಂಘದ ರಾಜ್ಯ ಉಪಾಧ್ಯಕ್ಷ ಅಯ್ಯಣ್ಣ ಜೆ.ಹಾಲಭಾವಿ, ಪ್ರವಾಸಿ ಮಾರ್ಗದರ್ಶಿಗಳಾದ ಶಿವಾಲಕುಮಾರ ಪಟ್ಟಣಕರ್, ಕಾಶಿನಾಥ ದುಮ್ಮನಸೂರ, ವೆಂಕಟೇಶ ವಾಲಿಕರ, ಸತೀಶಕುಮಾರ ರಾಠೋಡ, ಉಮೇಶ ಜಾಧವ, ಶ್ರೀಮಂತ, ರಾಹುಲ್ ವಂಟಿ, ಖಾಜಪ್ಪ, ಸಿದ್ರಾಮ, ಜಯಶ್ರೀ, ಸುನಂದಾ, ಮೀನಾಕ್ಷಿ, ಶಿವರಾಜ, ಸಂತೋಷ, ಕವಿತಾ, ಮಂಜುಳಾ ಅವರು, ಈಗಾಗಲೇ ಮಂಡಳಿ ವತಿಯಿಂದ 50 ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡಲು ಅನುಮೋದನೆ ದೊರೆತಿದೆ ಎಂದು ತಿಳಿದು ಬ0ದಿದ್ದು, ಜಿಲ್ಲೆಯಲ್ಲಿ ಈಗಾಗಲೆ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ಪಡೆದಿರುವ 17 ಜನ ಪ್ರವಾಸಿ ಮಾರ್ಗದರ್ಶಿಗಳು ಸುಮಾರು 9 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಅತಿ ವಿರಳವಾಗಿದ್ದು, ಈಗಿರುವ ಪ್ರವಾಸಿ ಮಾರ್ಗದರ್ಶಿಗಳ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಇಂತಹ ಸಂದರ್ಭದಲ್ಲಿ ಇನ್ನೂ 50 ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿಗಳಿಗೆ ನೀಡುವುದು ಸೂಕ್ತವಲ್ಲ. ಕೆ.ಕೆ.ಆರ್.ಡಿ.ಬಿ.7 ಜಿಲ್ಲೆಗಳಿಗೆ ಸಂಬಂಧಿಸಿದ್ದು, ಕೇವಲ ಕಲಬುರಗಿ ಜಿಲ್ಲೆಯ 50 ಜನರಿಗೆ ತರಬೇತಿ ನೀಡಲು ಮುಂದಾಗುವ ಮೂಲಕ ಈಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ತೊಂದರೆ ಕೊಡುತ್ತಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಜಾರಿಗೆ ಬರುವಂತೆ 50 ಜನರಿಗೆ ತರಬೇತಿ ನೀಡುತ್ತಿರುವುದು ರದ್ದುಪಡಿಸಿ, ಈಗಿರುವ 17 ಪ್ರವಾಸಿ ಮಾರ್ಗದರ್ಶಿಗಳಿಗೆ ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆ ತರಬೇತಿ ಅದರ ಜೊತೆಗೆ ಸಂವಹನ ಕೌಶಲ್ಯ ತರಬೇತಿಯನ್ನು, ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಹಿತಿ ಕೇಂದ್ರ ತೆರೆಯಲು ಕೆಕೆಆರ್‍ಡಿಬಿ ವತಿಯಿಂದ ಅನುದಾನ ನೀಡಬೇಕು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ 2013-14ರಲ್ಲಿ ಇಡೀ ರಾಜ್ಯದಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗಿದೆ. ಹಿಗ್ಗಿದ್ದು, ಮತ್ತೆ 50 ಜನರಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವುದು ಸರಿಯಲ್ಲ. ಆದ್ದರಿಂದ ತಕ್ಷಣ ಈ ಆದೇಶವನ್ನು ರದ್ದು ಪಡಿಸಬೇಕು, ಒಂದುವೇಳೆ ತರಬೇತಿ ನೀಡಲು ಮುಂದಾದರೆ ಈಗ ಇರುವ ಜಿಲ್ಲೆಯ 17 ಜನ ಪ್ರವಾಸಿ ಮಾರ್ಗದರ್ಶಿಗಳು ಕೆಕೆಆರ್‍ಡಿಬಿ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.