ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೮: ಪ್ರತಿಯೊಬ್ಬರಿಗೂ ಬದುಕಿಯ ಹಂತದಲ್ಲಿ ಪಟ್ಟಗಳ ಜೊತೆಗೆ ಹೊಸ ವಿಷಯಗಳನ್ನು ಕಲಿಯುವ ತುಳಿತುರಬೇಕು ಆಗ ಮಾತ್ರ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬುರವರು ಹೇಳಿದರು. ಅವರು ಎಸ್.ಎಸ್ ಬಡಾವಣೆಯಲ್ಲಿರುವ ಜೈನ್ ಟ್ರಿನಿಟಿ ಬಿಸಿನೆಸ್ ಸ್ಕೂಲ್ ಪ್ರಥಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜನ್ನು ಆಯ್ಕೆ ಮಾಡಿಕೊಂಡು ಸೇರಿಕೊಂಡಾಗ ಕಚ್ಚಾ ಕಲ್ಲಿನಂತೆ ಅವರನ್ನು ನೂರಾರು ಏಟುಗಳ ಮೂಲಕ ಸುಂದರ ಶಿಲ್ಪಗಳನ್ನಾಗಿ ಮಾರುಕಟ್ಟೆಗೆ ತಯಾರು ಮಾಡುವ ಕೆಲಸ ಅಧ್ಯಾಪಕರಾಗಿದ್ದು, ವಿದ್ಯಾರ್ಥಿಗಳು ಗುರುಗಳ ಏಟನ್ನು ನೋವು ಅಂತ ಅಂದುಕೊಂಡರೆ ಸುಂದರ ಶಿಲ್ಪಗಳಾಗದೆ ಬಿಸಾಕುವ ಕಲ್ಲಿನಂತಾಗುತ್ತಾರೆ ಅದೇ ಏಟುಗಳನ್ನು ಸಹಿಸಿಕೊಂಡು ಮುನ್ನಡೆದರೆ ಸುಂದರ ವಿಗ್ರಹಗಳಾಗಿ ಪೂಜಿಸಲ್ಪಡುತ್ತಾರೆ ಅಂತಹ ವಿದ್ಯಾರ್ಥಿಗಳಾಗಬೇಕೆಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಭಾವಂತರು ಅವರ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಕಾಲೇಜುಗಳಲ್ಲಿ ನಡೆಯುತ್ತದೆ ವಿದ್ಯಾರ್ಥಿಗಳು ಅಧ್ಯಾಪಕರ ಮಾತುಗಳನ್ನು ಕೇಳಿಸಿ ಸ್ಪಷ್ಟ ಗುರಿ ಇರಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನ ಬಂಗಾರದ ಜೀವನವನ್ನಾಗಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ನಿರ್ದೇಶಕರಾದ ಮೋಕ್ಷ ಜೈನ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಮಾತನಾಡುತ್ತಾ ಒರಿಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಬಂದ ಸಲಹೆಗಳನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನುಸರಿಸಿಕೊಂಡು ಅದನ್ನು ಪಾಲನೆ ಮಾಡಿದಾಗ ಕಾರ್ಯಕ್ರಮದ ಉದ್ದೇಶ ಸಫಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಶ್ರೀಮತಿ ವರ್ಷ ಜೈನ್ ರವರು ಹಾಗೂ ಜೈನ ಪಿಯು ಕಾಲೇಜಿನ ಕಾಲೇಜಿನ ಪ್ರಾಂಶುಪಾಲರಾದ ಸಲೀಂ ಮಲ್ಲಿಕ ಎಲ್ಲಾ ಬೋಧಕ ಹಾಗೂ ಬೋಧಕೆತರ ವರ್ಗದವರು ಭಾಗವಹಿಸಿದ್ದರು.