ಹೊಸತು ಮಕ್ಕಳ ರಂಗ ಬೇಸಿಗೆ ಶಿಬಿರ 2024


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.28: ಹದಿನೆಂಟು ದಿನಗಳ  ರಂಗ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಡಿ.ಆರ್.ಕೆ ರಂಗಸಿರಿಯ ರಾಮಕೃಷ್ಣ ವಿಲಾಸ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದರಾದ ಶಿವೇಶ್ವರಗೌಡ ಕಲ್ಲುಕಂಬ ಅವರು   ನಮ್ಮ ಭಾರತದ  ಸಂಸ್ಕೃತಿಯನ್ನು  ಬೆಳೆಸುವಂತ ವಿದ್ಯೆಯನ್ನು  ಮಕ್ಕಳಿಗೆ ನೀಡಿ ಶಿಕ್ಷಣದ ಜೊತೆಗೆ ಕಲೆಯು ಅಗತ್ಯ ಎಂದು ಹೇಳಿದರು
ಮಕ್ಕಳು ರಂಗ ಬೇಸಿಗೆ ಶಿಬಿರದಲ್ಲಿ ಕಲೆಗಳ ಜೊತೆಗೆ ಜೀವನದ ಪಾಠವನ್ನು ಸಹ ಕಲಿಯುತ್ತಾರೆ  ಇಂತಹ ಶಿಬಿರಗಳಿಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಳುಹಿಸಬೇಕು ಎಂದು ನಿವೃತ್ತ ಉಪನ್ಯಾಸಕರಾದ ಬಿ ಖಾಸಿಂ ಅಲಿ ಸಾಬ್ ರವರು ಹೇಳಿದರು
ನಾವು ಎಷ್ಟೇ ದೊಡ್ಡವರಾದರೂ ನಮ್ಮ ಸಂಸ್ಕೃತಿ ಮತ್ತು ನಮ್ಮ ಕೆಲಸವನ್ನ ಮರೆಯಬಾರದು ಎಂಬುದನ್ನು ರಂಗಭೂಮಿ ತಿಳಿಸುತ್ತದೆ ಶಿಬಿರದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡುತ್ತದೆ ಎಂದು    ಹೇಳಿದರು. 
ರಂಗ ಜಂಗಮ ಸಂಸ್ಥೆಯು ಸುಮಾರು 15 ವರ್ಷಗಳಿಂದ ನಿರಂತರವಾಗಿ ಮಕ್ಕಳ ಬೇಸಿಗೆ ಶಿಬಿರವನ್ನು ಏರ್ಪಡಿಸುತ್ತಾ ಈ ಶಿಬಿರದಲ್ಲಿ ಭಾಗವಹಿಸಿದ ಹಲವಾರು ಮಕ್ಕಳು ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯವನ್ನ ನಿರ್ವಹಿಸುತ್ತಿದ್ದಾರೆ.
ಮಕ್ಕಳಿಗೆ ಮುಂದಿನ ತಮ್ಮ ಬೇರೆ ಬೇರೆ ಕಿರುತೆರೆ ಹಿರಿತೆರೆ ಗಳಿಗೆ ಈ ಬೇಸಿಗೆ ಶಿಬಿರಗಳೇ ಮೆಟ್ಟಿಲುಗಳಾಗಿ ಸಹಾಯ ಮಾಡುತ್ತದೆ ಎಂಬುದಾಗಿ ಸಂಸ್ಥೆಯ ಕಾರ್ಯದರ್ಶಿ ಡಾ. ಅಣ್ಣಾಜಿ ಕೃಷ್ಣರೆಡ್ಡಿ ಮಾತನಾಡಿದರು
ವೇದಿಕೆ ಮೇಲೆ ಹಿರಿಯರಂಗಭೂಮಿ ಕಲಾವಿದರೂ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ವೆಂಕೋಬಚಾರಿ, ಬಿ.ಗಂಗಣ್ಣ, ಕೆ ಆರ್ ಎರೇಗೌಡ,ಬಸವರಾಜ್ ಬಿಸಲಹಳ್ಳಿ, ಪೋಷಕರಾದ ಯಶ್ವಂತ್ ಕುಮಾರ್ ,ಸುರೇಶ  ಶಿಬಿರದಲ್ಲಿ ಸಂಚಾಲಕರಾದ ನೇತಿ ರಘುರಾಮ ಉಪಸ್ಥಿತರಿದ್ದರು
ನಂತರ ಹೊಸತು ರಂಗ ಬೇಸಿಗೆ ಶಿಬಿರದ ಮಕ್ಕಳು ವಚನ ಗಾಯನ, ಕೋಲಾಟ, ಏಕಪಾತ್ರಾಭಿನಯ,ಮೂಕಾಭಿನಯ, ಪ್ರಸ್ತುತಪಡಿಸಿದರು ಸ್ವಾಗತ ವಿಷ್ಣು ಹಡಪದ ಪ್ರಾರ್ಥನೆ ಬಿಲ್ವಾಶ್ರೀ ವಂದನಾರ್ಪಣೆ ಪ್ರಭಾಕರ ರೆಡ್ಡಿ
ಕಾರ್ಯಕ್ರಮದ ನಿರೂಪಣೆ ಶಿಬಿರದ ನಿರ್ದೇಶಕರಾದ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ , ನೆರವೇರಿಸಿದರು