ಹೊಸತನದ ಹರಿಕಾರ ಸಂಜೆವಾಣಿ

ಯಾದಗಿರಿ:ಜ.1: ಸಂಜೆವಾಣಿ ದಿನಪತ್ರಿಕೆ ಹೊರತಂದ 2021ನೇ ವರ್ಷದ ದಿನದರ್ಶಿಕೆ (ಕ್ಯಾಲೆಂಡರ್) ಅನ್ನು ಮಾಜಿ ಶಾಸಕರಾದ ಡಾ|| ವೀರಬಸವಂತರೆಡ್ಡಿ ಮುದ್ನಾಳ ಗುರುವಾರ ಸಂಜೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಜೆವಾಣಿ ದಿನಪತ್ರಿಕೆ ಅತ್ಯುತ್ತಮವಾಗಿ ಜನಪರವಾಗಿ ಸುದ್ದಿ ತಲುಪಿಸುವ ಕೆಲಸ ಮಾಡುತ್ತಿದ್ದು ಜೊತೆಗೆ ವರ್ಷದ ಆರಂಭದಲ್ಲಿಯೇ ದೇವರುಗಳ ಚಿತ್ರಗಳನ್ನು ಹೊಂದಿರುವ ಆಕರ್ಷಕ ದಿನದರ್ಶಿಕೆಗಳನ್ನು ಬಿಡುಗಡೆ ಮಾಡುವ ಮೂಲಕ ನಾಡಿನಲ್ಲಿಯೇ ಹೊಸತನದ ಹರಿಕಾರನಾಗಿದೆ ಆ ಮೂಲಕ ಮನೆ ಮಾತಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂಜೆವಾಣಿ ಜಿಲ್ಲಾ ವರದಿಗಾರರೂ ಆದ ಯಾದಗಿರಿ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕ ವೈಜನಾಥ ಹಿರೇಮಠ ಮಾತನಾಡಿ ಪ್ರತಿವರ್ಷವೂ ವಿನೂತನವಾದ, ಸಂಗ್ರಹಯೋಗ್ಯವಾದ ಚಿತ್ರಪಟಗಳನ್ನು ಹೊಂದಿದ ದಿನದರ್ಶಿಕೆ ಹೊರತರುತ್ತಿರುವುದು ಸಂಜೆವಾಣಿ ದಿನಪತ್ರಿಕೆಯ ವೈಶಿಷ್ಠ್ಯವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಶರಣಗೌಡ ಮುದ್ನಾಳ, ನಗರಸಭೆ ಉಪಾಧ್ಯಕ್ಷರ ಪತಿ ಮಾರುತಿ ಕಲಾಲ್ ಸೇರಿದಂತೆ ಸಂಜೆವಾಣಿ, ಯಾದಗಿರಿ ಟೈಮ್ಸ್ ದಿನ ಪತ್ರಿಕೆ ಹಾಗೂ ಯಾದಗಿರಿ ಟೈಮ್ಸ್ ಯುಟೂಬ್ ಚಾನೆಲ್ ಸಿಬ್ಬಂದಿ ಪಾಲ್ಗೊಂಡಿದ್ದರು.