ಹೊಸಚಿತ್ರದಲ್ಲಿ ನಟಿಸಲು ಹೃತಿಕ್ ಸಹಿ

ಮುಂಬೈ,ಜ.೪- ಕೊರೋನಾ ಸೋಂಕಿನಿಂದ ಯಾವುದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳದೆ ಮನೆಯಲ್ಲೇ ಉಳಿದಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಹೊಸ ವರ್ಷದಲ್ಲಿ ಹೊಸ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ.

ನಿನ್ನೆಯಿಂದಲೇ ಹೊಸ ಚಿತ್ರದ ಚಿತ್ರೀಕರಣದ ಶೆಟ್ಟಿಗೆ ಭೇಟಿ ನೀಡಿರುವ ಹೃತಿಕ್ ರೋಷನ್ ಬಹಳ ದಿನಗಳ ನಂತರ ಚಿತ್ರೀಕರಣಕ್ಕೆ ಆಗಮಿಸಿರುವುದು ಖುಷಿಕೊಟ್ಟಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಸೀನ್ ಇನ್ ವಾರ್ ಚಿತ್ರದಲ್ಲಿ ಹೃತಿಕ್ ರೋಷನ್ ೨೦೧೯ರಲ್ಲಿ ಕಾಣಿಸಿಕೊಂಡಿದ್ದರು ಅದಾದ ನಂತರ ೨೦೨೦ರಲ್ಲಿ ಕರೋನಾ ಸೋಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾವುದೇ ಚಿತ್ರದಲ್ಲಿ ನಟಿಸಿದ್ದಾರೆ.

ಮರಳಿ ಚಿತ್ರೀಕರಣದ ಸೆಟ್ಟಿಗೆ ಆಗಮಿಸಿರುವುದು ಖುಷಿಕೊಟ್ಟಿದೆ ೨೦೨೧ ಹೊಸ ಉತ್ಸಾಹದಲ್ಲಿ ಆರಂಭಿಸುವುದಾಗಿ ಅವರು ಕೇಳಿಕೊಂಡಿದ್ದಾರೆ