
ಕಲಬುರಗಿ,ಏ.26-ಅಫಜಲಪೂರ ತಾಲೂಕಿನ ಹೊಳೆ ಭೋಸಗಾ ಗ್ರಾಮದ ಶ್ರೀ ಸದ್ಗುರು ಹೊನ್ನಲಿಂಗೇಶ್ವರ ಜಾತ್ರಾ ಮಹೋತ್ಸವದ ತನಿಮಿತ್ಯವಾಗಿ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಜರುಗುತ್ತದೆ. ಪುರಾಣದಲ್ಲಿ ಶರಣಬಸವೇಶ್ವರ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಶರಣರ ತತ್ವದಲ್ಲಿ ಮದುವೆ ಎಂದರೆ ಮ-ಮನುಷ್ಯತ್ವವನ್ನು ದು-ದುರುಪಯೋಗಪಡಿಸದಂತೆ ವೆ-ವ್ಯವಹರಿಸುವ ಕ್ರಿಯೆ ಮದುವೆ ಎಂದು ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನುವುದು ಮಮಕಾರ , ದುಃಖ, ವ್ಯಸನಗಳ ಸಂಗಮವಾಗಿದೆ ಎಂದು ನಾಡಿನ ಖ್ಯಾತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಪೂಜ್ಯ ಬಂಡಯ್ಯ ಶಾಸ್ತ್ರಿಗಳು ಪುರಾಣದಲ್ಲಿ ತಿಳಿಸಿದರು.
ಮಠದ ಅರ್ಚಕರಾದ ಪೂಜ್ಯ ಶ್ರೀ ರಾಘವೇಂದ್ರ ಮಹಾರಾಜರು, ಗ್ರಾಮದ ಹಿರಿಯರಾದ ಸಂಗಯ್ಯ ಸ್ವಾಮಿ ಹಿರೇಮಠ, ಮಹಾಂತಯ್ಯ ಹಿರೇಮಠ, ರುದ್ರಗೌಡ ಪಾಟೀಲ್, ಶರಣಯ್ಯ ಮಠ, ಹಣಮಂತ ಜಮಾದಾರ, ಮಲ್ಲಪ್ಪ ಮಡ್ಡಿ, ಸಂಜು ಮಾಶಾಳ, ಕಲಾವಿದರಾದ ಚೇತನ್ ಸ್ವಾಮಿ ಬೀದಿಮನಿ, ತಬಲಾ ವಾದಕರಾದ ಸೋಮಶೇಖರ ಕಲ್ಯಾಣಿ ಹಾಗೂ ಹೊಳೆ ಭೋಸಗಾ ಮತ್ತು ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತರು ಪಾಲ್ಗೊಂಡಿದ್ದರು.