ಹೊಳೆ ಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಕಾಸರಗೋಡು, ನ.೧೮-ಚಂದ್ರಗಿರಿ ಹೊಳೆಯಲ್ಲಿ ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ನಿನ್ನೆ ಬೆಳಗ್ಗೆ ಪತ್ತೆಯಾಗಿದೆ.
ಚೆಮ್ನಾಡ್ ಕೊಂಬನಡ್ಕದ ಮಿಸ್ಬಾಹ್(೧೫) ಮೃತಪಟ್ಟ ಬಾಲಕ. ಸೋಮವಾರ ಮಧ್ಯಾಹ್ನ ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೂವರು ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಮಿಸ್ಬಾಹ್ ನೀರುಪಾಲಾಗಿದ್ದು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ನಿನ್ನೆ ಬೆಳಗ್ಗೆ ಸ್ಥಳೀಯರು ಮತ್ತೆ ಶೋಧ ನಡೆಸಿದ್ದು, ಬಾಲಕ ಮುಳುಗಿದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಮಿಸ್ಬಾಹ್ ಚೆಮ್ನಾಡ್ ಜಮಾಅತ್ ಹಯರ್ ಸೆಕಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು.