ಹೊಳೆಆಲೂರು ಸಂತೆಯಲ್ಲಿ ಮತದಾನ ಜಾಗೃತಿ

ಹೊಳೆ ಆಲೂರ, ಮೇ6: ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದ ಮೇರೆಗೆ SಗಿಇಇP ಸಮಿತಿ ಹೊಳೆ ಆಲೂರು ಗ್ರಾಮ ಪಂಚಾಯಿತಿಯಿಂದ ಗ್ರಾಮದ ಸಂತೆಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.
ಹೊಳೆ ಆಲೂರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ ಸಂತೆಯಲ್ಲಿ ದಿನಸಿ ಅಂಗಡಿ, ಬೇಕರಿ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಹಾಗೂ ಎಲ್ಲಾ ಬೀದಿಬದಿ ವ್ಯಾಪಾರಸ್ಥರ ಬಳಿಗೆ ತೆರಳಿ ಅವರನ್ನು ಕಡ್ಡಾಯವಾಗಿ ಮೇ ಹತ್ತರಂದು ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು. ಇನ್ನು ವಿಶೇಷವೆಂದರೆ ಸ್ವತಃ ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿ SಗಿಇಇP ಸಮಿತಿಯಿಂದ ತಯಾರಿಸಲಾದ ಬಿತ್ತಿ ಪತ್ರಗಳನ್ನು ತಮ್ಮ ಅಂಗಡಿಗಳಿಗೆ ಅಂಟಿಸಿಕೊಳ್ಳುವ ಮೂಲಕ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡರು. ರಸ್ತೆ ಬದಿ ವ್ಯಾಪಾರಸ್ಥರು ತಾವು ಮಾರಲು ತಂದಿರುವ ತರಕಾರಿ ದಿನಸಿ ಕಾಳುಕಡಿ ಗಳ ಮಧ್ಯ ಬಿದ್ದಿಪತ್ರಗಳನ್ನು ಅಂಟಿಸಿಕೊಂಡು ಮತದಾನ ಜಾಗೃತಿಗೆ ಸಾತ್ ನೀಡಿದರು. ಸಂತೆಗೆ ಬಂದ ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳ ಮೇಲೂ ಮತದಾನ ದಿನಾಂಕ ಹಾಗೂ ಸಮಯ ಒಳಗೊಂಡಿರುವ ಬಿತ್ತಿ ಪತ್ರಗಳನ್ನು ಅಂಟಿಸಿಕೊಂಡು ಗ್ರಾಮ ಪಂಚಾಯತಿಯ SಗಿಇಇP ಸಮಿತಿ ಸದಸ್ಯರ ಕಾರ್ಯವೈಕರಿಗೆ ಮೆಚ್ಚುಗೆಯಿಂದ ಬೆಂಬಲ ಸೂಚಿಸಿದರು.