ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.08 ಹೊಳಲ್ಕೆರೆ ಬಿಜೆಪಿ ಪಕ್ಷದ ಶಾಸಕ ಚಂದ್ರಪ್ಪ ಅವರು ಮಾದಿಗ ಸಮಾಜದ ಮುಖಂಡರ ಕುರಿತು ಒಳ ಮೀಸಲಾತಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ವಿವಿಧ ಡಿಎಸ್ಎಸ್ ಸಂಘದ ಪದಾಧಿಕಾರಿಗಳು ಬುಧವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಖಂಡಿಸಿದರು.
ತಾಲೂಕ ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್ ದೊಡ್ಡಬಸಪ್ಪ ಮಾತನಾಡಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳ ಮೀಸಲಾತಿ ಕಾರಣರಾದ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಗೋವಿಂದ ಕಾರ ಚೋಳ ಅವರು ಬಿಜೆಪಿಗೆ ಸೋಲಿಗೆ ಮುಖ್ಯ ಕಾರಣ ಎಂದು ಚಂದ್ರಪ್ಪ ಅವರ ಹೇಳಿಕೆ ಖಂಡನೀಯ ಇಂತಹ ಬೇಜವಾಬ್ದಾರಿ ಹೇಳಿಕೆ ಯಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಚಲವಾದಿ ಕಾಳಿ ಬಸವರಾಜ. ಯಡ್ರಾಮ್ಮನಹಳ್ಳಿ ಮರಿಯಪ್ಪ. ಲೋಕಪ್ಪ. ಅಂಜಿನಪ್ಪ. ಉಲ ವತ್ತಿ ಓಮೇಶ. ಕಿತ್ತೂನೂರು ದುರ್ಗಪ್ಪ. ಹರಿ ಗೊಂಡನಹಳ್ಳಿ ದುರುಗಪ್ಪ.ಇತರರು ಉಪ್ಪರಗಟ್ಟಿ ಬುಳ್ಳಪ್ಪ ಪಿಂಜಾರ ಹೆಗ್ಡಳ್ ರವಿ ಇದ್ದರು.