ಹೊಳಲ್ಕೆರೆ ಎಪಿಎಂಸಿ ಸಭಾಂಗಣದಲ್ಲಿ ಜೇಡರ ದಾಸಿಮಯ್ಯ ಜಯಂತಿ ಆಚರಣೆ

ಹೊಳಲ್ಕೆರೆ.ಏ.೧೭: ಪಟ್ಟಣ ಎ.ಪಿ.ಎಂ.ಸಿ.ಕಚೇರಿಯಲ್ಲಿ ಶ್ರೀ ಜೇಡರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯದರ್ಶಿ ಎ.ಜಿ.ಸುರೇಂದ್ರಬಾಬು ರವರು ಜೇಡರ ದಾಸಿಮಯ್ಯರವರ ಭಾವಚಿತ್ರಕ್ಕೆ ಹೂಗಳ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಫಾಟಿಸಿದರು ನಂತರದಲ್ಲಿ ಮಾತನಾಡಿದ ಅವರು ಜೇಡರ ದಾಸಿಮಯ್ಯನವರು 10ನೇ ಶತಮಾನದ ಸಂತ ಶ್ರೇಷ್ಠರು ಇವರು ದೇವರನ್ನು ಒಲಿಸಿಕೊಳ್ಳಲು ಸಂಸಾರದಿಂದ ಸನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು. ಅದನ್ನು ಸಿದ್ದಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನಡೆಗೆ ಹೊರಟು ಹೋಗುತ್ತಾರೆ. ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಅವರ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ. ನಿಷ್ಟುರವಾದ ಸೃಷ್ಟಿ ವಾಕ್ಯತೆ, ಮಾರ್ಮಿಕವಾದ ಸಂಕ್ಷೀಪ್ತ ಶೈಲಿ, ಔಚಿತ್ಯ ಪೂರ್ಣವಾದ ದುಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತೇವೆ. ದೇವರ ದಾಸಿಮಯ್ಯ ವಿಶ್ವದ ಪ್ರಥಮ ವಚನಕಾರ. ಅವರು ರಾಮನಾಥ ಎಂಬ ಹೆಸರಿನಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ. ದೇವರ ದಾಸಿಮಯ್ಯನವರು ತಮ್ಮ ಆಧ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಚ್ಚೆಯಲ್ಲಿ ಹೆಚ್ಚೆಯನಿಟ್ಟು, ತಮ್ಮ ಹೆಚ್ಚು ಪಾಡುಗಳನ್ನು ನಮಗಾಗಿ ಉಳಿಸಿಕೊಂಡಿದ್ದಾರೆ. ಇವುಗಳನ್ನು ಅನುಕರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರಷನನ್ನು ಪಡೆದ ಸಮಾಜವೇ ಧನ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಆಂತರಿಕ ಲೆಕ್ಕ ಪರಿಶೋಧಕರಾದ ಹೆಚ್.ಎನ್.ನಾಗರಾಜ್ ಭದ್ರತಾ ಸಿಬ್ಬಂದಿ ಹೆಚ್.ಚಂದ್ರಹಾಸ್.ಎ.ಸಂತೋಷ್ ಕುಮಾರ್ ಅನುಷಾ.ಆರ್ ಮುಂತಾದವರು ಭಾಗವಹಿಸಿದ್ದರು.