ಹೊಲಿಗೆ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ


ಹುಬ್ಬಳ್ಳಿ ಏ 26 : ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಜವಳಿ ವಲಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ, ಆದರ್ಶ್ ಕೌಶಲ್ಯ ಅಭಿವೃದ್ಧಿ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಹುಬ್ಬಳ್ಳಿಯ ದಾಜೀಬಾನ ಪೇಟದಲ್ಲಿರುವ ಭಾರತೀಯ ಕಂಪ್ಯೂಟರ್ ಅಕ್ಯಾಡೆಮಿಯಲ್ಲಿ, 2 ತಿಂಗಳು ಅವಧಿಯ ಯಾಂತ್ರೀಕೃತ ಹೊಲಿಗೆ ತರಬೇತಿಯಲ್ಲಿ ಉತ್ತೀರ್ಣಗೊಂಡಿರುವ 25 ಶಿಬಿರಾರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮಾಣ ಪತ್ರವನ್ನು ಇತ್ತೀಚೆಗೆ ನೀಡಲಾಯಿತು.
ಈ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಹು-ಧಾ ಎಸ್. ಎಸ್. ಕೆ. ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠ ಪಿ. ಜಡಿ ಇವರು ಪ್ರಮಾಣ ಪತ್ರ ವಿತರಿಸಿ ಮಾತನಾಡಿ ಗಾರ್ಮೆಂಟ್ ಕ್ಷೇತ್ರ ತುಂಬಾ ವಿಸ್ತಾರವಾಗಿರುವ ಕ್ಷೇತ್ರವಾಗಿದ್ದು, ಇಲ್ಲಿ ಕಲಿತಿರುವ ತಾವುಗಳು ಇದರ ಸದುಪಯೋಗ ಪಡೆದು ಗಾರ್ಮೆಂಟ್ಸ್ ಗಳಲ್ಲಿ ನೌಕರಿ ಮಾಡುವದರ ಜೊತೆಗೆ ಮನೆಯಲ್ಲಿಯೂ ಸಹ ಸ್ವಂತ ಉದ್ಯೋಗ ಮಾಡಿ ಕುಟುಂಬದ ಅಭಿವೃದ್ಧಿಗೆ ಕಾರಣರಾಗಬೇಕೆಂದು ತಿಳಿಸಿದರು.
ಅಲ್ಲದೇ 18-35 ವರ್ಷದೊಳಗಿನವರಿಗೆ ಉಚಿತ ಹೊಲಿಗೆ ತರಬೇತಿ ನೀಡುವ ಸರ್ಕಾರದ ಉದ್ದೇಶಕ್ಕೆ ಸ್ಪಂದಿಸಬೇಕೆಂದು ಕರೆ ನೀಡಿದರು.
ಮಾಜಿ ಮಹಾಪೌರ ಡಿ. ಕೆ. ಚವ್ಹಾನ್ ಮಾತನಾಡಿ, ಹೊಲಿಗೆ ತರಬೇತಿ ನೀಡಿರುವ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದನ್ನು ಶ್ಲಾಘಿಸಿ, ಪಾಸಾದ ಎಲ್ಲ ಶಿಭಿರಾರ್ಥಿಗಳು ತಮ್ಮ ಉದ್ಯೋಗದಿಂದ ಕಷ್ಟಪಟ್ಟು ಶ್ರಮವಹಿಸಬೇಕೆಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಎನ್. ಜಿತೂರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಈಗ ಕಲಿತು ಉತ್ತೀರ್ಣರಾಗಿರುವ ಶಿಭಿರಾರ್ಥಿಗಳು, ಈ ಎರಡು ತಿಂಗಳ ಶಿಬಿರದಲ್ಲಿ ಕಲಿತಿದ್ದನ್ನು ಮುಂದೆವರಿಸಿಕೊಂಡು ಹೋಗಬೇಕೆಂದರೆ ಯಾವದಾದರೂ ಗಾರ್ಮೆಂಟ್ಸ್ ನಲ್ಲಿ ಕನಿಷ್ಠ ಆರು ತಿಂಗಳಾದರೂ ಕೆಲಸಕ್ಕೆ ಹೋದರೆ ಒಳ್ಳೆಯದೆಂದು ಹೇಳಿದ ಅವರು, ಕಲಿತ ಶಿಭಿರಾರ್ಥಿಗಳಿಗೆ ಸ್ವಂತ ಉದ್ಯೋಗ ಮಾಡಲು ಕೇಂದ್ರ ಸರ್ಕಾರವು ಅತ್ಯಂತ ಕಡಿಮೆ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದೆಯೆಂದು ತಿಳಿಸಿದರು.
ಎಸ್.ಎಸ್.ಕೆ. ಸಮಾಜದ ವಿಶ್ವೇಶ್ವರ ನಗರ ಪಂಚಾಯತಿಯ ಮುಖ್ಯ ಧರ್ಮದರ್ಶಿ ದತ್ತುಸಾ ಡಿ. ಅಥಣಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಯೋಜಕಿ ಕೌಶಲ್ಯ ಪೆÇೀಳ ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ಅಭಾರಮನ್ನಣೆ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆ ಭೋದಕಿ ಸುನಿತಾ ಹಂಚಿನಾಳ