ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್ ವಿತರಿಸಿದ ಶಾಸಕ ಕುಮಠಳ್ಳಿ

ಅಥಣಿ :ಮಾ.7: ನಿರುದ್ಯೊ?ಗಿಗಳಿಗೆ ಉದ್ಯೊ?ಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇಂದು ಹಲವು ಯುವಕ ಯುವತಿಯರು ಕರಕುಶಲ ಹಾಗೂ ಇನ್ನಿತರ ಕೌಶಲ ಹೊಂದಿದ್ದು ಅಂತಹವರು ಸ್ವ ಉದ್ಯೊ?ಗದ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರ ನೀಡುವ ಇಂತಹ ಉಪಕರಣಗಳು ಅತಿ ಉಪಯುಕ್ತವಾಗಿವೆ. ಫಲಾನುಭವಿಗಳು ಉಪಕರಣಗಳ ಸದ್ಬಳಕೆಯಿಂದ ಜೀವನ ರೂಪಿಸಿಕೊಳ್ಳಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಮಹೇಶ ಕುಮಠಳ್ಳಿ ಅವರು ಕರೆ ನೀಡಿದರು
ಅವರು ಪಟ್ಟಣದ ಲಿಡಕರ್ ಕಾಲೋನಿಯಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಬೆಳಗಾವಿ, ಲಿಡಕರ್ ಕೌಶಲ್ಯಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಹೊಲಿಗೆ ಯಂತ್ರ, ಟೂಲ್ ಕಿಟ್ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚರ್ಮೋದ್ಯಮಿಗಳು ಹಾಗೂ ಅವರ ಕುಟುಂಬದ ಅವಲಂಬಿತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು,

ಈ ವೇಳೆ ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ. ಅನೀಲ ಸೌದಾಗರ ಮಾತನಾಡಿ, ಶಾಸಕ ಮಹೇಶ ಕುಮಠಳ್ಳಿಯವರು ಹಿಂದೆ ಯಾವ ಶಾಸಕರೂ ಕೂಡ ಮಾಡದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನತೆಯ ಅಶೋತ್ರಗಳಿಗೆ ಸ್ಪಂದಿಸಿದ್ದಾರೆ, ಸಾಕಷ್ಟು ಯೋಜನೆಗಳಿಗೆ ಅನುದಾನ ತಂದಿದ್ದಾರೆ. ದಲಿತರಿಗೆ, ದಲಿತ ಕಾಲೋನಿಗಳಿಗೆ ಅತೀ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದಾರೆ. ನಷ್ಟದಲ್ಲಿದ್ದ ಲಿಡಕರ್ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಲಿಡಕರ್ ನಿಗಮಕ್ಕೆ ಪುನಶ್ಚೇತನ ನೀಡಿದರು ಎಂದು ಶ್ಲಾಘಿಸಿದರು,

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಡಾ ರವಿ ಸಂಕ, ಗುತ್ತಿಗೆದಾರ ರಾಜು ಆಲಬಾಳ, ಮುಖಂಡರಾದ ಶಶಿ ಸಾಳವೆ, ಸಿದ್ದು ಪಾಟೀಲ, ರಮೇಶ ಪವಾರ, ವಿಲೀನರಾಜ ಯಳಮಲ್ಲೆ, ಈಶ್ವರ ಗಡದೆ, ಶೇಖರ ಸೌದಾಗರ, ಶಂಕರ ಶಿಂಧೆ, ಸದಾಶಿವ ಶಿಕ್ರೆ, ಬಸವರಾಜ ಹಳ್ಳದಮಳ, ವಿಠ್ಠಲ ಕಾಂಬಳೆ, ಸುಂದರ ಸೌದಾಗರ, ವಿನಯಗೌಡ ಪಾಟೀಲ, ಸಿದ್ದು ಮಾಳಿ ಸೇರಿದಂತೆ ಇತರರಿದ್ದರು.