ಹೊಲಿಗೆ ಯಂತ್ರ ವಿತರಣೆ

ಕಾಳಗಿ. ನ.2: ಪಟ್ಟಣದ ನಿಸರ್ಗ ಗುರುಕುಲ ಆಯೋಜಿಸಿದ 23 ಕೌಶಲ್ಯ ಕೇಂದ್ರಗಳಿಗೆ ಹೊಲಿಗೆ ಯಂತ್ರ ಹಾಗೂ 77 ಪ್ರಗತಿ ಕೇಂದ್ರಗಳಿಗೆ ಜಮಖಾನೆ ವಿತರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರಗಿ ಅವರಿಂದ 100 ಹೊಲಿಗೆ ಯಂತ್ರಗಳು ಮತ್ತು 154 ಜಮಖಾನೆಗಳು ವಿತರಣೆ ಮಾಡಲಾಯಿತು.

ಚಿಂಚೋಳಿ ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಾಸ ಅಕಾಡೆಮಿ ಸೇಡಂ ಜಿಲ್ಲಾ ಸಂಚಾಲಕ ಶ್ರೀ ಶಂಕರ ಸುಲೆಗಾಂವ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ಶರಣಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ವೀರೇಂದ್ರಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ತಾಲ್ಲೂಕು ಪಂಚಾಯಿತಿ ಇಒ ಅನಿಲಕುಮಾರ ರಾಠೋಡ ವೇದಿಕೆಯಲ್ಲಿದ್ದರು.
ನಿಸರ್ಗ ಗುರುಕುಲದ ಕು.ಸುಕನ್ಯಾ ಚಿದ್ರಿ ಯೋಗ ಪ್ರದರ್ಶನ ಮಾಡಿದಳು. ಶಿಕ್ಷಕಿ ಶಿವಲೀಲಾ ಅಷ್ಟಗಿ ಪ್ರಾರ್ಥನೆ ಗೀತೆ ಹೇಳಿದರು. ಪ್ರಧಾನ ಅಧ್ಯಾಪಕಿ ಸುಧಾರಾಣಿ ಚಿದ್ರಿ ನಿರೂಪಿಸಿದರು. ಅಧ್ಯಕ್ಷ ಗುಂಡಪ್ಪ ಕರೆಮನೋರ ಪ್ರಾಸ್ತಾವಿಕ ಮಾತು ಹೇಳಿದರು. ಕೆಕೆ ಸಂಘದ ದಯಾನಂದ ಹೊಸಮನಿ ಸ್ವಾಗತಿಸಿದರು. ಇತ್ತೀಚಿಗೆ ನಿಧನರಾದ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ, ಕೊನೆಯಲ್ಲಿ ವಂದನಾರ್ಪಣೆ ಸೇರಿದಂತೆ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕೆಕೆ ಸಂಘದ ಸೇಡಂ ಜಿಲ್ಲಾ ಸಂಚಾಲಕ ಆದಿತ್ಯ ಜೋಶಿ, ಕಾಳಗಿಯ ಪ್ರಸಾದ ಹಳ್ಳಿ, ಗೌರಿಶಂಕರ ಸೂರವರ, ಬಸವರಾಜ ಸಾಕ್ರೆ, ಮೌನೇಶ ಪೂಜಾರಿ, ಶಿವಲೀಲಾ ಸಾಲಿ ಒಳಗೊಂಡು ಶಿಕ್ಷಕಿಯರಾದ ನಾಗರತ್ನ ಹತ್ತಿ, ಪುಷ್ಪಾ ಯಡ್ರಾಮಿ, ಲಕ್ಷ್ಮಿ ತಳವಾರ, ಪೂಜಾ ಸಿಂಧೆ ಇದ್ದರು. ತಾಲ್ಲೂಕಿನ ವಿವಿಧೆಡೆಯ ಜನರು ಪಾಲ್ಗೊಂಡಿದ್ದರು.