ಹೊಲಿಗೆ ಯಂತ್ರ ವಿತರಣೆ: ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಕಲಬುರಗಿ.ನ.08:ಕಲಬುರಗಿ ಮಹಾನಗರ ಪಾಲಿಕೆಯ 2014-15ನೇ ಸಾಲಿನ ಬಿ.ಆರ್.ಜಿ.ಎಫ್ ಯೋಜನೆಯಡಿ ಬಾಕಿ ಉಳಿದ ಹೊಲಿಗೆ ಯಂತ್ರಗಳ ವಿತರಣೆಗಾಗಿ ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ಅಂತಿಮವಾಗಿ ಆಯ್ಕೆಯಾದ ಫಲಾನುಭವಿಗಳು ಈ ಪತ್ರಿಕಾ ಪ್ರಕಟಣೆ ಪ್ರಕಟವಾದ ಒಂದು ವಾರದೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಬಿ.ಆರ್.ಜಿ.ಎಫ್. ಶಾಖೆಗೆ ಸಂಪರ್ಕಿಸಿ ತಮ್ಮ ಹೊಲಿಗೆ ಯಂತ್ರಗಳನ್ನು ಪಡೆಯಬೇಕೆಂದು ಅವರು ತಿಳಿಸಿದ್ದಾರೆ.