ಹೊಲಿಗೆ ತರಬೇತಿ ಸಮಾರೋಪ

ಕಲಬುರಗಿ: ಜ.19:ಇಲ್ಲಿಗೆ ಸಮೀಪದ ಕೆರೆಬೋಸಗಾ ಗ್ರಾಮದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಮಾಳಿಂಗರಾಯ ಜ್ಞಾನ ವಿಕಾಸ್ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ನಡೆಯಿತು.
ಟ್ರಸ್ಟ್ನ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ, ದುರ್ಬಲ ವರ್ಗದ ಮಹಿಳೆಯರನ್ನು ಗುರುತಿಸಿ ಸ್ವಾವಲಂಬಿ ಜೀವನಕ್ಕಾಗಿ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯಲ್ಲಿ ಮೂರು ತಿಂಗಳ ಕಾಲ ಇಲ್ಲಿನ ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ ನೀಡಿಲಾಗಿದೆ. 25ಕ್ಕೂ ಹೆಚ್ಚು ಮಹಿಳೆಯರು ಇದರ ಲಾಭ ಪಡೆದಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸುಭಾಷ ಬಣಗಾರ್ ಅವರು ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ, ಇಂದು ಕುಟುಂಬದ ಒಬ್ಬ ಸದಸ್ಯರು ಇಲ್ಲಿ ಬಂದು ಹೊಲಿಗೆ ಕಲಿತಿದ್ದು, ಮುಂದೆ ಆ ಮನೆಯ ಎಲ್ಲರೂ ಹೊಲಿಗೆ ಕಲಿಯಲು ಸಹಕಾರಿಯಾಗುತ್ತದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸ್ವಯಂ ಉದ್ಯೋಗಗಳು ಅಗತ್ಯವಾಗಿದೆ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಗಳು ಬಹಳ ಉಪಯುಕ್ತವಾಗಿವೆ. ಸಮಾಜದ ಕಟ್ಟ ಕಡೆಯ ವ್ಯೆಕ್ತಿಯನ್ನು ಗುರುತಿಸಿ ಅವರಿಗೆ ಆರ್ಥಿಕ ಶಿಸ್ತನ್ನು ಮೂಡಿಸುತ್ತಿರುವುದನ್ನು ಶ್ಲಾಘೀಸಿದರು.
ಪ್ರಾದೇಶಿಕ ಕಚೇರಿಯ ಹಿರಿಯ ಸಮನ್ವಯಾಧಿಕಾರಿ ವಿಜಯಲಕ್ಷಿ??ೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಅರೋಗ್ಯ, ಶಿಕ್ಷಣ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೇಂದ್ರದ ಸದಸ್ಯರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳಬೇಕು. ಸ್ವ- ಉದ್ಯೋಗವನ್ನು ಮಾಡಿ ಸ್ವಾವಲಂಬನೆ ಬದುಕು ಕಟ್ಟಿಕೊಳಬೇಕು ಎಂದರು.
ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ಸರಸ್ವತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಕಾಂತ, ಅನೂಪ್ ಕಮಲಾಪುರ್, ತಾಲೂಕಿನ ಯೋಜನಾಧಿಕಾರಿಗಳು ಕಲ್ಲನಗೌಡ, ಸಮನ್ವಯಾಧಿಕಾರಿ ಕವಿತಾ ಕೌಜಲಗಿ, ವಲಯದ ಮೇಲ್ವಿಚಾರಕ ಈಶ್ವರಗೌಡ, ಸೇವಾ ಪ್ರತಿನಿಧಿ ಕಲ್ಪನಾ, ಕೇಂದ್ರದ ಸದಸ್ಯರು ಭಾಗವಹಿಸಿದ್ದರು.