ಹೊಲದಲ್ಲಿ ತೀರ್ಥೋದ್ಬವ ಇದು ವೈರಮುಡಿ ಜಾತ್ರಾ ಮಹೋತ್ಸವದ ಪವಾಡ

ಮೇಲುಕೋಟೆ : ಏ.05:- ಚೆಲುವನಾರಾಯಣಸ್ವಾಮಿಯ ದಿವ್ಯಕ್ಷೇತ್ರ ಮೇಲುಕೋಟೆ ಹಲವು ಅಚ್ಚರಿಯ ತಾಣವಾಗಿದ್ದು ಭಕ್ತರ ಇಷ್ಠಾರ್ಥ ಕರುಣಿಸುವ ಧಾರ್ಮಿಕಕೇಂದ್ರವಾಗಿದೆ ಪರಂಪರೆ ಸಂಸ್ಕøತಿಗಳ ಆಗರವಾದ ಈ ಶ್ರೀವೈಷ್ಣವಕ್ಷೇತ್ರ ಸಾಕ್ಷಾತ್ ಭೂ ವೈಕುಂಠ ಎಂದೇ ಪ್ರಖ್ಯಾತವಾಗಿದೆ.
ವಾರ್ಷಿಕ ವೈರಮುಡಿ ಬ್ರಹ್ಮೋತ್ಸವದ ವೇಳೆ ತೀರ್ಥಸ್ನಾನದಂದು ಪ್ರತಿವರ್ಷ ಪವಾಡವೊಂದು ನಡೆದು ಬರುತ್ತಿದ್ದು ಭಕ್ತರಲ್ಲಿ ಅಚ್ಚರಿಮೂಡಿಸುತ್ತಿದೆ. ಈ ಕೌತುಕ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರೂ ಸಹ ಈ ಮಾಹಿತಿ ಭಕ್ತರಿಗೆ ಇಲ್ಲ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವದಲ್ಲಿ ಪಾಲ್ಗುಣ/ಚೈತ್ರಮಾಸದಹಸ್ತನಕ್ಷತ್ರದಂದು ಅತ್ಯಂತ ಪ್ರಮುಖವಾದ ಚೆಲುವನಾರಾಯಣಸ್ವಾಮಿಯ ಜಯಂತಿ ನಡೆಯುತ್ತದೆ. ಅದೇ ದಿನ ಚೆಲುವನಾರಾಯಣಸ್ವಾಮಿಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ನೆರವೇರಿಸಲಾಗುತ್ತದೆ ಇದೇ ದಿನ ಚಿನಕುರಳಿ ಮಾರ್ಗದಲ್ಲಿ ಬರುವ ನಾರಾಯಣಸ್ವಾಮಿ ಪಾದಸ್ಪರ್ಷವಾದ ನಾರಾಯಣಪುರ ಪ್ರತಿವರ್ಷ ಅಚ್ಚರಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿನ ದಲಿತ ಭಕ್ತ ಶ್ರೀಧರ್‍ಗೆ ಸೇರಿದ ಬರಡು ಹೊಲದ ಒಂದೆರಡು ಅಡಿತೆಗೆದ ಕುಂಡಿಕೆಯಲ್ಲಿ ತೀರ್ಥಸಂಗ್ರಹವಾಗಿ ಅಚ್ಚರಿ ಮೂಡಿಸುತ್ತದೆ. ಸಂಪೂರ್ಣ ಬರಡಾಗಿರುವ ಹೊಲ ಗಾಳಿ ಬೀಸಿದರೆ ದೂಳುಮಣ್ಣು ಹಾರುವ ಜಾಗದಲ್ಲಿ ತೀರ್ಥ ಉದ್ಭವಿಸುತ್ತದೆ ಮೇಲುಕೋಟೆ ನಾರಾಯಣಸ್ವಾಮಿ ಜಯಂತಿಯ ಹಿಂದಿನದಿನವೇ ತೀರ್ಥಸಂಗ್ರಹವಾಗುವ ಕುಂಡಿಕೆ ತೆಗೆಯುವ ಸ್ಥಳದಲ್ಲಿ ಸುತ್ತಲೂ ಬರಡು ನೆಲ ತೇವವಾಗುತ್ತಾ ಬರುತ್ತದೆ ತೀರ್ಥಸ್ನಾನದಂದು ಬೆಳಿಗ್ಗೆ ಭಕ್ತರು ಹೊಲದಲ್ಲಿ ಚಪ್ಪರ ಹಾಕಿ ಚೆಲುವನಾರಾಯಣನ ಪೋಟೋ ಇಟ್ಟು ಪೂಜಿಸಿ ನಿಗಧಿತ ಸ್ಥಳದಲ್ಲಿ ಗುಂಡಿ ತೆಗೆಯುತ್ತಾರೆ
ಕೇವಲ ಒಂದೆರಡು ಅಡಿ ಆಳ ತೆಗೆದ ಕುಂಡಿಕೆಯಲ್ಲಿ ಮೇಲುಕೋಟೆಯ ಕಲ್ಯಾಣಿಲ್ಲಿ ತೀರ್ಥಸ್ನಾನವಾಗುತ್ತಿದ್ದಂತೆ ಪಚ್ಚಕರ್ಫೂರದ ವಾಸನೆಯುಳ್ಳ ತೀರ್ಥಶೇಖರವಾಗುತ್ತದೆ ವಿವರ ತಿಳಿದ ಭಕ್ತರು ಅಲ್ಲಿಗೆ ಭೇಟಿಮಾಡಿ ತೀರ್ಥಸ್ವೀಕರಿಸುತ್ತಾರೆ ಈ ವರ್ಷ ಏಪ್ರಿಲ್ 6ರ ಗುರುವಾರದಂದು ತೀರ್ಥಸ್ನಾನ ಬಂದಿದೆ ಅಂದು ಮದ್ಯಾಹ್ನ 11 ರ ಸುಮಾರಿಗೆ ಮೇಲುಕೋಟೆ ಕಲ್ಯಾಣಿಯಲ್ಲಿ ಸ್ವಾಮಿಯ ತೀರ್ಥಸ್ನಾನ ಆರಂಭವಾದ ತಕ್ಷಣ ಈ ಅಚ್ಚರಿ ನಡೆಯವ ನಿರೀಕ್ಷೆಯಲ್ಲಿ ಭಕ್ತರು ಕಾತರರರಾಗಿದ್ದಾರೆ