ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಘಟಕವನ್ನು ಸುಪರ್ದಿಗೆ ಪಡೆಯಲಾಗಿದೆ : ಡಿಸಿ ವಿ ವಿ ಜೋತ್ಸ್ನಾ

ಕಲಬುರಗಿ :ಮೇ.04: ನಗರದ ವಿಜಯ ಆಕ್ಸಿಜನ್ ಉತ್ಪಾದನಾ ಘಟಕದಿಂದ ರಾತ್ರೋರಾತ್ರಿ ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿರುವುದರ ಹಿನ್ನೆಲೆ ಆಕ್ಸಿಜನ್ ಘಟಕವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಅಧಿಕಾರಿಗಳು ಆಕ್ಸಿಜನ್​ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾದಾಗ ಘಟಕದ ಮಾಲೀಕ ಒಳಬಿಡದೇ ಮೊಂಡುತನ ಪ್ರದರ್ಶಿಸಿದ್ದಾನೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಜಿಲ್ಲಾಡಳಿತ ಜಪ್ತಿ ಮಾಡಿ, ಸದ್ಯ ಎಸಿ ಮಾನಿಟರಿಂಗ್​ನಲ್ಲಿ ಯುನಿಟ್ ರನ್ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ದಿನನಿತ್ಯ ಹಲವಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದರೂ ಸಹ, ಕೆಲವರು ದುಡ್ಡಿನ ಆಸೆಗೆ ಜಿಲ್ಲಾಡಳಿತದ ಕಣ್ಣುತಪ್ಪಿಸಿ ಆಕ್ಸಿಜನ್​ನ ರಾತ್ರೋರಾತ್ರಿ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾರೆ.
ಈ ಕೂಡಲೇ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಆಕ್ಸಿಜನ್ ಸಪ್ಲೈ ತಡೆಗಟ್ಟಬೇಕು. ಆಗಲೇ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಸಾವುಗಳನ್ನು ತಡೆಯಬಹುದು ಹಾಗೂ ಆಕ್ಸಿಜನ್ ಕೊರತೆ ಕೂಡ ನೀಗಿಸಬಹುದು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.