ಹೊರ‌ ರಾಜ್ಯದವರಿಗೆ‌ ಆರ್ ಟಿಪಿಸಿಆರ್ ಕಡ್ಡಾಯ: ಸುಧಾಕರ್

ಬೆಂಗಳೂರು, ಮಾ.25- ನಗರದಲ್ಲಿ ಕೋವಿಡ್ -19 ಪ್ರಕರಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವ ಎಲ್ಲರೂ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಆರೋಗ್ಯ ಸಚಿವ ಕೆ ಸುಧಾಕರ್ ಇಂದು ತಿಳಿಸಿದ್ದಾರೆ.

ಕೇರಳ, ಮಹಾರಾಷ್ಟ್ರ, ಪಂಜಾಬ್, ಚಂಡೀಗಢ ಮತ್ತು ಇತರ ರಾಜ್ಯಗಳನ್ನು ಒಳಗೊಂಡಂತೆ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬರುವ ಜನರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ‌ಸುದ್ದಿಗಾರರಿಗೆ ತಿಳಿಸಿದರು.

20 ರಿಂದ 40 ವರ್ಷ ವಯಸ್ಸಿನವರಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಲಕ್ಷಣರಹಿತ ಅಥವಾ ರೋಗ ಲಕ್ಷಣಗಳಿರುವ ಯಾವುದೇ ವ್ಯಕ್ತಿ ನಿರ್ಲಕ್ಷ್ಯ ವಹಿಸಬಾರದು. ಅವರು ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಹೇಳಿದರು.

ಮಾಸ್ಕ್ ಧರಿಸದಿದ್ದರೆ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ. ಮಾರುಕಟ್ಟೆಗಳು, ,ಬಸ್ ನಿಲ್ದಾಣಗಳು, ಚಿತ್ರಮಂದಿರಗಳು, ಮದುವೆ ಸಭಾಂಗಣಗಳು, ಈವೆಂಟ್ ಸ್ಥಳಗಳು, ಧಾರ್ಮಿಕ ಸ್ಥಳಗಳು, ಕಾಲೇಜುಗಳು ಮತ್ತು ಯಾವುದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.